ಬಾಂಗ್ಲಾದೇಶದ ನುಸುಳುಕೋರರಿಗೆ ಆಶ್ರಯ ಒದಗಿಸಿ : ಅಕ್ರಮ ವಲಸಿಗರ ಪರವಾಗಿ ಪಿತ್ರೋಡ ಬ್ಯಾಟಿಂಗ್‌

ಅಕ್ರಮವಾಗಿ ಬರುವವರಿಗೆ ನೆಲೆ ಒದಗಿಸಬೇಕೆಂದು ಹೇಳಿದ ರಾಹುಲ್‌ ಗಾಂಧಿ ಮಾರ್ಗದರ್ಶಕ

ಹೊಸದಿಲ್ಲಿ: ಬಾಂಗ್ಲಾದೇಶದ ಅಕ್ರಮ ನುಸುಳುಕೋರರಿಗೆ ಭಾರತದಲ್ಲಿ ನೆಲೆ ಕಲ್ಪಿಸಬೇಕೆಂದು ಹೇಳಿರುವ ರಾಹುಲ್‌ ಗಾಂಧಿಯ ಮಾರ್ಗದರ್ಶಕ ಸ್ಯಾಮ್‌ ಪಿತ್ರೋಡ ಹೇಳಿಕೆಗೆ ತೀಕ್ಷ್ಣ ಪ್ರತಿಕ್ರಿಯೆ ವ್ಯಕ್ತವಾಗಿದೆ. ಬಾಂಗ್ಲಾದೇಶದ ಅಕ್ರಮ ವಲಸಿಗರ ಸಮಸ್ಯೆ ಬಿಗಡಾಯಿಸಿರುವಾಗ ಮತ್ತು ಬಾಂಗ್ಲಾದಲ್ಲಿ ಹಿಂದುಗಳ ಮೇಲೆ ನಿರಂತರ ಹಿಂಸಾಚಾರ ನಡೆಯುತ್ತಿರುವ ಹೊರತಾಗಿಯೋ ಪಿತ್ರೋಡ ಬಾಂಗ್ಲಾದ ಅಕ್ರಮ ವಲಸಿಗರ ಪರವಾಗಿ ಮಾತನಾಡಿರುವುದು ಕಾಂಗ್ರೆಸ್‌ನ ರಹಸ್ಯ ಅಜೆಂಡಾದ ಭಾಗ ಎಂದು ಅನೇಕರು ಟೀಕಿಸಿದ್ದಾರೆ.

ಬಾಂಗ್ಲಾ ವಲಸಿಗರು ಒಂದು ವೇಳೆ ಭಾರತಕ್ಕೆ ಬರಲು ಬಯಸಿದರೆ, ಅದು ಅಕ್ರಮವಾಗಿದ್ದರೂ ನಾವು ಎಲ್ಲರನ್ನೂ ಸೇರಿಸಿಕೊಳ್ಳಬೇಕು ಎಂದು ರಾಹುಲ್ ಗಾಂಧಿಯ ಆಪ್ತ ಸಹಾಯಕರಾಗಿರುವ ಸ್ಯಾಮ್ ಪಿತ್ರೋಡ ವಿವಾದಾತ್ಮಕ ಹೇಳಿದ್ದಾರೆ. ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲಿನ ದೌರ್ಜನ್ಯದ ನಡುವೆ ಭಾರತೀಯ ಸಾಗರೋತ್ತರ ಕಾಂಗ್ರೆಸ್ ಅಧ್ಯಕ್ಷ ಸ್ಯಾಮ್ ಪಿತ್ರೋಡರ ಈ ಹೇಳಿಕೆ ರಾಜಕೀಯವಾಗಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.































 
 

ಬಾಂಗ್ಲಾದೇಶಿಗರು ಇಲ್ಲಿಗೆ ಬರಲು ಬಯಸಿದರೆ, ಅಕ್ರಮವಾಗಿಯಾದರೂ ಅವರು ಬರಲಿ. ನಾವು ಎಲ್ಲರನ್ನೂ ಸೇರಿಸಿಕೊಳ್ಳಬೇಕು. ನಮಗೆ ಅದರಿಂದ ಸ್ವಲ್ಪ ಕಷ್ಟವಾದರೂ ಪರವಾಗಿಲ್ಲ, ಸಹಿಸಿಕೊಳ್ಳಬೇಕು ಎಂದು ಹೇಳುವ ಮೂಲಕ ವಲಸಿಗರು ಭಾರತದಲ್ಲಿ ನೆಲೆಸಬೇಕೆಂದು ಪ್ರತಿಪಾದಿಸಿದ್ದಾರೆ. ಅಕ್ರಮ ವಲಸಿಗರ ವಿರುದ್ಧ ಕೇಂದ್ರ ಸರ್ಕಾರದ ಕಠಿಣ ಕ್ರಮವನ್ನು ಟೀಕಿಸಿರುವ ಪಿತ್ರೋಡ ಸರ್ಕಾರ ವಲಸೆಯನ್ನು ನಿಭಾಯಿಸುವ ಬದಲು ಜಟಿಲಗೊಳಿಸಿದೆ ಎಂದು ಹೇಳಿದ್ದಾರೆ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top