ಉಡುಪಿ : ಹಾಡಹಗಲೇ ಬಾಲಕಿಗೆ ಕಿರುಕುಳ

ಆರೋಪಿಯನ್ನು ಶೀಘ್ರ ಬಂಧಿಸಲು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ಸೂಚನೆ

ಉಡುಪಿ: ಉಡುಪಿ ನಗರದಲ್ಲಿ ಹಾಡಹಗಲೇ ಯುವಕನೊಬ್ಬ ಐದು ವರ್ಷ ಪ್ರಾಯದ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆಘಾತಕಾರಿ ಘಟನೆ ಸಂಭವಿಸಿದೆ. ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ಈ ಘಟನೆಯ ಬಗ್ಗೆ ಕಳವಳ ವ್ಯಕ್ತಪಡಿಸಿ ಆರೋಪಿಯನ್ನು ಶೀಘ್ರ ಬಂಧಿಸಲು ಪೊಲೀಸರಿಗೆ ಸೂಚಿಸಿದ್ದಾರೆ.

ನಗರದ ಪೂರ್ಣಪ್ರಜ್ಞ ಕಾಲೇಜು ಸಮೀಪದ ಓಣಿಯಲ್ಲಿ ಸುಮಾರು 30 ವರ್ಷದ ಯುವಕ ಗುರುವಾರ ಮಧ್ಯಾಹ್ನ ಈ ಕೃತ್ಯ ಎಸಗಿದ್ದು, ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಬಾಲಕಿಯ ಪೋಷಕರು ಈ ಕುರಿತು ದೂರು ನೀಡಿದ ಬಳಿಕ ಪೊಲೀಸರು ಎಫ್‌ಐಆರ್‌ ದಾಖಲಿಸಿಕೊಂಡಿದ್ದಾರೆ. ಅಪಘಾತದಲ್ಲಿ ಗಾಯಗೊಂಡು ಬೆಳಗಾವಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಲಕ್ಷ್ಮೀ ಹೆಬ್ಬಾಳ್ಕರ್‌ ವಿಷಯ ತಿಳಿದ ಕೂಡಲೇ ಅಲ್ಲಿಂದಲೇ ಅಧಿಕಾರಿಗಳನ್ನು ಸಂಪರ್ಕಿಸಿ ಆರೋಪಿಯನ್ನು ಬಂಧಿಸಬೇಕೆಂದು ಸೂಚನೆ ನೀಡಿದ್ದಾರೆ.































 
 

ಆರೋಪಿಯ ಚಹರೆ ಸಿಸಿಟಿವಿಯಲ್ಲಿ ಸ್ಪಷ್ಟವಾಗಿ ದಾಖಲಾಗಿದ್ದು, ಈತನನ್ನು ಕಂಡವರು ಠಾಣೆಗೆ ಮಾಹಿತಿ ನೀಡಬೇಕೆಂದು ಪೊಲೀಸರು ಮನವಿ ಮಾಡಿದ್ದಾರೆ. ಮಾಹಿತಿಯಿರುವ ಸಾರ್ವಜನಿಕರು ಕಂಟ್ರೋಲ್‌ ರೂಂ ನಂಬರ್‌ 9480805400 ಅಥವಾ ಮಹಿಳಾ ಪೊಲೀಸ್‌ ಠಾಣೆ ಪೊಲೀಸ್‌ ನಿರೀಕ್ಷಕರು 9480805430 ನಂಬರ್‌ನಲ್ಲಿ ಸಂಪರ್ಕಿಸಬಹುದು.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top