ಕಾಪು ಠಾಣೆಯಲ್ಲಿರುವಾಗ ಅನೈತಿಕ ಸಂಬಂಧವಿತ್ತು ಎಂದು ಆರೋಪಿಸಿದ ಪತ್ನಿ
ಚಿಕ್ಕಮಗಳೂರು: ಕಳಸ ಪಿಎಸ್ಐ ನಿತ್ಯಾನಂದ ಗೌಡ ವಿರುದ್ಧ ಅವರ ಪತ್ನಿ ವರದಕ್ಷಿಣೆ ಕಿರುಕುಳ ಮತ್ತು ಅನೈತಿಕ ಸಂಬಂಧದ ಕುರಿತು ದೂರು ನೀಡಿದ್ದಾರೆ. ನ್ಯಾಯ ಕೇಳಿಕೊಂಡು ಪೊಲೀಸ್ ಠಾಣೆಗೆ ಬರುವ ಮಹಿಳೆಯರನ್ನು ನಿತ್ಯಾನಂದ ಗೌಡ ಶೋಷಿಸುತ್ತಾರೆ. ತನಗೆ
50 ಲಕ್ಷ ರೂ. ವರದಕ್ಷಿಣೆ ತರಲು ಕಿರುಕುಳ ನೀಡುತ್ತಿದ್ದಾರೆ ಎಂದು ಪತ್ನಿ ಗಂಭೀರ ಆರೋಪ ಮಾಡಿದ್ದಾರೆ. ಈ ದೂರಿನ ಆಧಾರದ ಮೇಲೆ ಎಸ್ಐ ನಿತ್ಯಾನಂದ ಗೌಡ ವಿರುದ್ಧ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಆರೋಪಿಯ ಸಹೋದರಿ ಕೂಡ ತನ್ನ ಮೇಲೆ ಹಲ್ಲೆ ನಡೆಸಿ ದೌರ್ಜನ್ಯ ಎಸಗಿದ್ದಾರೆ ಎಂದು ಮಹಿಳೆ ಆರೋಪಿಸಿದ್ದಾರೆ.
ಪಾಸ್ಪೋರ್ಟ್ ಪರಿಶೀಲನೆ ಸಂಬಂಧಿಸಿ ತಮ್ಮ ಬಳಿ ಬರುವ ಮಹಿಳೆಯರನ್ನು ನಿತ್ಯಾನಂದ ಗೌಡ ಶೋಷಿಸುತ್ತಾರೆ. ಉಡುಪಿಯ ಕಾಪು ಠಾಣೆಯಲ್ಲಿದ್ದಾಗ ಮುಸ್ಲಿಂ ಮಹಿಳೆ ಜೊತೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದರು. ನಾನು ಅವರ ರೂಂಗೆ ಹೋದಾಗ ಕಾಂಡೋಮ್ಗಳು ಪತ್ತೆಯಾಗಿದ್ದವು ಎಂದು ಪತ್ನಿ ಆರೋಪಿಸಿದ್ದಾರೆ.
ಅಲ್ಪಸಂಖ್ಯಾತ ಸಮುದಾಯದ ಮಹಿಳೆಯ ಕುಟುಂಬಕ್ಕೆ ಈ ವಿಚಾರ ತಿಳಿದಾಗ ಅವರು ನಿತ್ಯಾನಂದ ಗೌಡ ಮೇಲೆ ಹಲ್ಲೆ ಯತ್ನಿಸಿದರು. ಆದರೆ ಉಡುಪಿಯ ಎಸ್ಪಿ ಅವರನ್ನು ರಕ್ಷಿಸಿದ್ದರು. ಕೋಟಾ ಠಾಣೆಯಲ್ಲೂ ಮಹಿಳೆಗೆ ನ್ಯಾಯ ಕೊಡಿಸುತ್ತೇನೆ ಎಂದು ದೈಹಿಕವಾಗಿ ಬಳಸಿಕೊಂಡಿದ್ದಾರೆ. ಬೆಂಗಳೂರಿನಲ್ಲೂ ಮಹಿಳೆಯೊಬ್ಬಳ ಜೊತೆ ಸಂಬಂಧ ಇಟ್ಟುಕೊಂಡು ಸಿಕ್ಕಿಬಿದ್ದಿದ್ದರು. ಆ ಮಹಿಳೆಗೆ 4 ಲಕ್ಷ ರೂ. ಕೊಟ್ಟು ಬಚಾವ್ ಆಗಿದ್ದಾರೆ ಎಂದು ತಿಳಿಸಿದ್ದಾರೆ. ಪ್ರಕರಣದ ಸತ್ಯಗಳನ್ನು ಪರಿಶೀಲಿಸುತ್ತಿದ್ದೇವೆ ಮತ್ತು ಆರೋಪಗಳು ಸಾಬೀತಾದರೆ ಆರೋಪಿ ಪಿಎಸ್ಐ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ಕಳಸ ಪೊಲೀಸರು ತಿಳಿಸಿದ್ದಾರೆ.