ಪುತ್ತೂರು: ಮೆಸ್ಕಾಂ ಉದ್ಯೋಗಿ, ಮಿಷನ್ ಗುಡ್ಡ ನಿವಾಸಿ ಆಶ್ರಫ್ ಇಂದು ಬೆಳಿಗ್ಗೆ ಪುತ್ತೂರು ಆಸ್ಪತ್ರೆಯಲ್ಲಿ ನಿಧನರಾದರು.
ಕೆಲ ಸಮಯದಿಂದ ಕಿಡ್ನಿ ವೈಫಲ್ಯದಿಂದ ಅವರು ಬಳಲುತ್ತಿದ್ದರು ಎಂದು ಹೇಳಲಾಗಿದೆ.
ದಿ.ಅದ್ರಾಮ ರವರ ಪುತ್ರರಾಗಿದ್ದ ಅವರು ಚಿಂಙಾಣಿ ನಿವಾಸಿಯಾಗಿದ್ದು, ಬಳಿಕ ಪೋಳ್ಯ ಮಸೀದಿ ಬಳಿ ವಾಸವಿದ್ದು ಇದೀಗ ಉರ್ಲಾಂಡಿ ಯಲ್ಲಿರುವ ಪ್ಲಾಟ್ ಒಂದರಲ್ಲಿ ವಾಸವಾಗಿದ್ದರು. ಮೃತರು ಪತ್ನಿ, ಮಕ್ಕಳನ್ನು ಅಗಲಿದ್ದಾರೆ.
























