ಮೀನು ಮೃತಪಟ್ಟಿದ್ದಕ್ಕೆ ಮನನೊಂದು 13ರ ಬಾಲಕ ಆತ್ಮಹತ್ಯೆಗೆ ಶರಣು

ತಿರುವನಂತಪುರಂ : ಪ್ರೀತಿಯ ಮೀನು ಸಾವನ್ನಪ್ಪಿದ್ದಕ್ಕೆ 13 ವರ್ಷದ ಬಾಲಕ ಆತ್ಮಹತ್ಯೆ ಮಾಡಿಕೊಂಡ ಘಟನೆ ಕೇರಳದ ಮಲಪ್ಪುರಂ ಜಿಲ್ಲೆಯ ಪೊನ್ನಾಯಿಯ ಚಂಗರಂಕುಲಂನಲ್ಲಿ ನಡೆದಿದೆ. ರೋಷನ್ ಮೆನನ್ ಮೃತ ಬಾಲಕ.

ರೋಶನ್ ಮೂಕುತಲ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಓದುತ್ತಿದ್ದ. ಪ್ರಾಣಿಗಳೆಂದರೆ ಆತನಿಗೆ ತುಂಬಾ ಇಷ್ಟವಾಗಿತ್ತು. ಈ ಹಿನ್ನೆಲೆಯಲ್ಲಿ ಮನೆಯಲ್ಲಿ ಅಕ್ವೇರಿಯಂ ಇತ್ತು. ಅಕ್ವೇರಿಯಂಯಲ್ಲಿ ಸಾಕಿದ್ದ ಮೀನು ಹಿಂದಿನ ದಿನ ಸಾವನ್ನಪ್ಪಿತ್ತು. ಇದರಿಂದಾಗಿ ರೋಷನ್ ಮಾನಸಿಕ ಖಿನ್ನತೆಗೆ ಒಳಗಾಗಿದ್ದ.

ಮರುದಿನ ರೋಷನ್ ಪಾರಿವಾಳಕ್ಕೆ ಆಹಾರ ನೀಡಲು ಮನೆಯಿಂದ ಹೊರಗೆ ಬಂದಿದ್ದ. ಅದಾದ ಬಳಿಕ ಒಂದು ಗಂಟೆಯಾದರೂ ರೋಷನ್ ಮನೆಗೆ ಮರಳಿ ಬಂದಿಲ್ಲ. ಆತಂಕಗೊಂಡ ಮನೆಯವರು ಬಾಲಕನನ್ನು ಹುಡುಕಾಡಿದಾಗ ಟೆರೇಸ್‍ನಲ್ಲಿ ರೋಷನ್ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ. ಕೂಡಲೇ ಆತನನ್ನು ಖಾಸಗಿ ಆಸ್ಪತ್ರೆಗೆ ಸಾಗಿಸಲಾದರೂ, ಆತ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ.



































 
 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top