ಸಿಬಿಐಯವರು ಎಂದು ಹೇಳಿ ಮಹಿಳೆ ಖಾತೆಯಿಂದ 24 ಲ.ರೂ. ಲಪಟಾಯಿಸಿದ ವಂಚಕರು

ಪೊಲೀಸ್ ಸಮವಸ್ತ್ರ ಧರಿಸಿ ವೀಡಿಯೊ ಕಾಲ್‌ ಮಾಡಿದ್ದ ಆರೋಪಿ

ಕಾರ್ಕಳ : ಸಿಬಿಐ ಅಧಿಕಾರಿ ಹೆಸರಿನಲ್ಲಿ ಆನ್‌ಲೈನ್ ಮುಖಾಂತರ ಮಹಿಳೆಗೆ 24 ಲಕ್ಷ ರೂ. ವಂಚಿಸಿದ ಘಟನೆ ಜ. 7ರಂದು ಕಾರ್ಕಳದಲ್ಲಿ ಸಂಭವಿಸಿದೆ.

ಪ್ರೀಮ ಶರಿಲ್ ಡಿಸೋಜ ವಂಚನೆಗೊಳಗಾದವರು. ಇವರ ಮೊಬೈಲ್‌ಗೆ ಜ. 7ರಂದು ಅಪರಿಚಿತ ವ್ಯಕ್ತಿಯೊಬ್ಬರು ಕರೆ ಮಾಡಿ ತಾನು ದಿಲ್ಲಿ ಟೆಲಿಕಾಂ ಇಲಾಖೆಯಿಂದ ಕಾಲ್ ಮಾಡುತ್ತಿದ್ದು ನಿಮ್ಮ ಆಧಾರ್ ನಂಬರ್‌ನಿಂದ ಉತ್ತರ ಪ್ರದೇಶದಲ್ಲಿ ಬೇರೆ ಸಿಮ್ ಖರೀದಿಸಿ ಬೇರೆ ಬೇರೆ ಅಕ್ರಮ ಚಟುವಟಿಕೆಗಳಲ್ಲಿ ಭಾಗಿಯಾಗಿ ನಿಮ್ಮ ವಿರುದ್ಧ ಹಲವು ಪ್ರಕರಣಗಳು ದಾಖಲಾಗಿದ್ದು ಈ ಬಗ್ಗೆ ಸೈಬರ್ ಅಧಿಕಾರಿಯು ನಿಮ್ಮೊಂದಿಗೆ ಮಾತನಾಡುತ್ತಾರೆ ಎಂದು ತಿಳಿಸಿರುತ್ತಾರೆ.































 
 

ಆ ಬಳಿಕ ವೀಡಿಯೋ ಕಾಲ್ ಮಾಡಿ ಪೊಲೀಸ್ ಸಮವಸ್ತ್ರ ಧರಿಸಿದ ವ್ಯಕ್ತಿಯು ತಾನು ಸಿಬಿಐ ಅಧಿಕಾರಿ ಎಂದು ತಿಳಿಸಿ ನೀವು ತನಿಖೆಗೆ ಸಹಕರಿಸಬೇಕು ಈ ವಿಚಾರವನ್ನು ಯಾರ ಬಳಿಯಲ್ಲಿಯೂ ಹೇಳುವಂತಿಲ್ಲ, ಹೇಳಿದರೆ ನಿಮ್ಮ ಗಂಡ ಮತ್ತು ಮಗುವಿಗೆ ತೊಂದರೆಯಾಗುತ್ತದೆ ಎಂದು ಹೇಳಿ ಪ್ರೀಮ ಶರಿಲ್ ಡಿಸೋಜ ಅವರ ಬ್ಯಾಂಕ್ ಖಾತೆಗಳಲ್ಲಿರುವ ಹಣದ ವಿವರ ಪಡೆದುಕೊಂಡು ಹಣವನ್ನು ಅವರು ತಿಳಿಸಿದ ಖಾತೆಗೆ ವರ್ಗಾವಣೆ ಮಾಡಬೇಕು ಇಲ್ಲವಾದರೆ ಅರೆಸ್ಟ್ ವಾರಂಟ್ ಕಳುಹಿಸುತ್ತೇವೆ ಎಂದು ಹೆದರಿಸಿದ್ದಾನೆ. ಅದರಂತೆ ಪ್ರೀಮ ಶರಿಲ್ ಡಿಸೋಜ ವಂಚಕರು ತಿಳಿಸಿದ ಫೆಡರಲ್ ಬ್ಯಾಂಕ್‌ನ ಖಾತೆಗೆ 14 ಲಕ್ಷ ರೂ. ಮತ್ತು ಯೆಸ್ ಬ್ಯಾಂಕ್ ಖಾತೆಗೆ 10 ಲಕ್ಷ ರೂ. ಎಫ್‌ಡಿ ಖಾತೆಯಿಂದ ಆರ್‌ಟಿಜಿಎಸ್ ಮೂಲಕ ವರ್ಗಾವಣೆ ಮಾಡಿದ್ದಾರೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top