ಪುತ್ತೂರು : ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಾಮೆತ್ತಡ್ಕ ಒಕ್ಕೂಟದ ಸಂಪೂರ್ಣ ಸುರಕ್ಷಾ ನೋಂದಾವಣೆಯ ಉದ್ಘಾಟನೆ ಭಾನುವಾರ ಸಾಮೆತ್ತಡ್ಕ ಶಾಲೆಯಲ್ಲಿ ನಡೆಯಿತು.
ಒಕ್ಕೂಟದ ಅಧ್ಯಕ್ಷೆ ಅಹಲ್ಯ ಹಾಗೂ ಸಂಘಗಳ ಸದಸ್ಯರು ದೀಪ ಬೆಳಗಿಸಿ ಸುರಕ್ಷಾ ನೋಂದಣೆಗೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಆಂತರಿಕ ಲೆಕ್ಕ ಪರಿಶೋಧಕಿ ಲತಾ ಸಂಪೂರ್ಣ ಸುರಕ್ಷಾ ಕುರಿತು ಮಾಹಿತಿ ನೀಡಿದರು. ಸಾಮೆತ್ತಡ್ಕ ಶಾಲಾ ಟ್ರಸ್ಟ್ ಸದಸ್ಯ ದಿನೇಶ್ ಕಾಮತ್ ಆರೋಗ್ಯ ವಿಮೆ ಕುರಿತು ಮಾಹಿತಿ ನೀಡಿದರು. ಶಾಲಾ ಮುಖ್ಯ ಶಿಕ್ಷಕಿ ಮರಿಯಾ ಟೀಚರ್, ಕಸಬ ಕ್ಷೇತ್ರದ ಸೇವಾ ಪ್ರತಿನಿಧಿ ಪೂಜಾ, ವಿಮಲ ಉಸಸ್ಥಿತರಿದ್ದರು.
ಪುತ್ತೂರು ವಲಯ ಮೇಲ್ವಿಚಾರಕಿ ಯೋಗೀಶ್ವರಿ ಸ್ವಾಗತಿಸಿದರು. ಸೇವಾ ಪ್ರತಿನಿಧಿ ರಜನಿ ವಂದಿಸಿದರು.