ಪುತ್ತೂರು: ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣದಲ್ಲಿ ಸಚಿವ ಪ್ರಿಯಾಂಕ ಖರ್ಗೆ ಕೈವಾಡವಿರುವುದನ್ನು ಆರೋಪಿಸಿ ಆರೋಪಿಸಿ ಪುತ್ತೂರು ಬಿಜೆಪಿಯಿಂದ ಬಿಜೆಪಿ ಕಚೇರಿ ಬಳಿ ಇಂದು ಪ್ರತಿಭಟನೆ ನಡೆಯಿತು.
ಪ್ರತಿಭಟನೆಯನ್ನುದ್ದೇಶಿಸಿ ಬಿಜೆಪಿ ಗ್ರಾಮಾಂತರ ಮಂಡಲದ ಅಧ್ಯಕ್ಷ ದಯಾನಂದ ಶೆಟ್ಟಿ ಉಜಿರುಮಾರು ಮಾತನಾಡಿ, ರಾಜ್ಯ ಕಾಂಗ್ರೆಸ್ ಸರಕಾರದ ಭ್ರಷ್ಟಾಚಾರದಿಂದ ತುಂಬಿದೆ. ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣದಲ್ಲಿ ಸಚಿವ ಪ್ರಿಯಾಂಕ ಖಗೆ ಅವರ ಕೈವಾಡ ಇರುವ ಬಗ್ಗೆ, ಡೆತ್ ನೋಟ್ ನಲ್ಲಿ ಉಲ್ಲೇಖವಿರುವುದರಿಂದ ಕೂಡಲೇ ಸಚಿವ ಪ್ರಿಯಾಂಕ ಖರ್ಗೆಯವರನ್ನು ಸಂಪುಟದಿಂದ ವಜಾಗೊಳಿಸಿ ಅವರ ವಿರುದ್ಧ ಪ್ರಕರಣದ ದಾಖಲಿಸಬೇಕು. ಗುತ್ತಿಗೆದಾರರಿಗೆ ರಕ್ಷಣೆ ನೀಡಬೇಕು ಎಂದು ಆಗ್ರಹಿಸಿದರು.
ಬಿಜೆಪಿ ಮುಖಂಡ ಮುರಳಿಕೃಷ್ಣ ಹಸಂತಡ್ಕ ಮಾತನಾಡಿ, ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಆಡಳಿತಕ್ಕೆ ಬಂದ ನಂತರ ದಿನಂಪ್ರತಿ ಕೆಲವೊಂದು ಅಧಿಕಾರಿಗಳು, ಗುತ್ತಿಗೆದಾರರು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಇದು ಕಾಂಗ್ರೆಸ್ ಸರಕಾರದ ಭ್ರಷ್ಟ ಆಡಳಿತಕ್ಕೆ ಹಿಡಿದ ಕೈಗನ್ನಡಿ. ಇದಕ್ಕೆ ಸೇರ್ಪಡೆ ಎಂಬಂತೆ ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಮಾಡಿಕೊಂಡಿದ್ದು ಬಾಕಿ ಬಿಲ್ ಬಿಡುಗಡೆಗೆ ಒಂದು ಕೋಟಿ ರೂಪಾಯಿ ಹಣವನ್ನು ನೀಡುವಂತೆ ದಿನನಿತ್ಯ ಪೀಡಿಸುತ್ತಿದ್ದ ಎಂಬುದಾಗಿ ಉಲ್ಲೇಖಿಸಲಾಗಿದೆ. ಇದನ್ನೆಲ್ಲಾ ನೋಡುವಾಗ ಈ ಆತ್ಮಹತ್ಯೆ ಪ್ರಕರಣದಲ್ಲಿ ಸಚಿವ ಪ್ರಿಯಾಂಕ ಖರ್ಗೆ ಅವರ ಸಚಿವತನದ ಪ್ರಭಾವದಿಂದಾಗಿ ಇದು ಆಗಿದೆ ಎಂದು ಕಾಣುತ್ತಿದೆ. ಈ ಕಾರಣಕ್ಕೋಸ್ಕರ ತಕ್ಷಣ ಪ್ರಿಯಾಂಕ ಖರ್ಗೆ ಯನ್ನು ತನ್ನ ಸರಿವುಟದಿಂದ ವಜಾಮಾಡಿ ಅವರ ವಿರುದ್ಧ ಮೊಕದ್ದಮೆಯನ್ನು ದಾಖಲಿಸಿ ತನಿಖೆಗೆ ಒಳಪಡಿಸಬೇಕು ಹಾಗೂ ಆತ್ಮಹತ್ಯೆ ಮಾಡಿಕೊಂಡ ಸಚಿನ್ ಅವನ ಕುಟುಂಬಕ್ಕೆ ರಕ್ಷಣೆಯನ್ನ ನೀಡಬೇಕು ಎಂದು ಸರಕಾರವನ್ನು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ನಗರ ಮಂಡಲ ಅಧ್ಯಕ್ಷ ಶಿವಕುಮಾರ್ ಪಿ ಬಿ, ಪ್ರಧಾನ ಕಾರ್ಯದರ್ಶಿ ನಾಗೇಶ್ ಪ್ರಭು, ಉಪಾಧ್ಯಕ್ಷ ಯುವರಾಜ ಪೆರಿಯತ್ತೋಡಿ, ಜಿಲ್ಲಾ ಎಸ್ ಟಿ ಮೋರ್ಚಾ ಅಧ್ಯಕ್ಷ ಹರೀಶ್ ಬಿಜತ್ರೆ, ನೆಟ್ಟಣಿಗೆ ಮುಡೂರು ಮಹಾಶಕ್ತಿ ಕೇಂದ್ರ ಅಧ್ಯಕ್ಷ ರಾಜೇಶ ಪರ್ಪುಂಜ, ಒಳಮೊಗ್ರು ಶಕ್ತಿಕೇಂದ್ರ ಅಧ್ಯಕ್ಷ ಮಾದವ ರೈ ಕುಂಬ ಹಿರಿಯರಾದ ಸುರೇಶ್ ಆಳ್ವ ನಗರ ಮಂಡಲದ ಗೋವರ್ಧನ್, ದರ್ಬೆ ಮಹಾಶಕ್ತಿಕೇಂದ್ರ ಅಧ್ಯಕ್ಷೆ ದೀಕ್ಷಾ ಪೈ, ಆರ್ಯಾಪು ಮಹಾಶಕ್ತಿಕೇಂದ್ರ ಅಧ್ಯಕ್ಷ ವಿಜಯ ಬಿಎಸ್, ಪುಣಚ ಮಹಾಶಕ್ತಿ ಕೇಂದ್ರದ ರಾಜೇಶ್ ಬಾಳೆಕಲ್ಲು, ಕುಂಬ್ರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕ ಪ್ರಕಾಶ್ಚಂದ್ರ ಕೈಕಾರ, ಉಮೇಶ್ ಗೌಡ, ವಿನೋದ್ ಕುಮಾರ್ ಶೆಟ್ಟಿ, ವಸಂತ ಕುಮಾರ್, ರಾಜೀವಿ ರೈ, ಅಮರನಾಥ ರೈ, ಸಂತೋಷ್ ಆಳ್ಳ, ಶಿವರಾಮ ಗೌಡ, ಮಲ್ಲಿಕಾ, ಶ್ರೀನಿವಾಸ ಪ್ರಸಾದ್, ಯುವ ಮೋರ್ಛದ ಪವನ್, ಸನ್ಮತ್ ರೈ, ಮಾಧ್ಯಮ ಸಂಚಾಲಕ ಮಹೇಶ್ ರೈ ಕೇರಿ ಮತ್ತಿತರರು ಉಪಸ್ಥಿತರಿದ್ದರು.
























