ಪುತ್ತೂರು: ವಿದ್ಯುತ್ ಶಾಕ್ ಹೊಡೆದು ಮಗುವೊಂದು ಮೃತಪಟ್ಟ ಘಟನೆ ನೆ.ಮುಡೂರು ಗ್ರಾಮದ ಗಾಳಿಮುಖ ಗೋಳಿತ್ತಡಿಯಲ್ಲಿ ನಿನ್ನೆ ಸಂಜೆ ನಡೆದಿದೆ.
ಗೋಳಿತ್ತಡಿ ನಿವಾಸಿ ಸಿಂಸಾರ್ ಎಂಬವರ ಮೂರೂವರೆ ವರ್ಷದ ಪುತ್ರ ಝನು ಮೃತಪಟ್ಟ ಮಗು.
ಅಟವಾಡುತ್ತಾ ಮನೆಯ ಅರ್ಥ್ ಗೆ ಸಂಬಂಧಿಸಿದ ತಂತಿಯನ್ನು ಮಗು ಮುಟ್ಟಿದೆ. ಈ ವೇಳೆ ವಿದ್ಯುತ್ ಶಾಕ್ ಹೊಡೆದು ಮೃತಪಟ್ಟಿದ್ದು, ಮಗುವನ್ನು ರಕ್ಷಿಸಲು ಬಂದ ಮಗುವಿನ ಅಜ್ಜ ಶಾಫಿ ಅವರಿಗೆ ವಿದ್ಯುತ್ ಶಾಕ್ ಹೊಡೆದು ಗಂಭೀರ ಸ್ಥಿತಿಯಲ್ಲಿ ಚೆರ್ಕಳದ ಆಸ್ಪತ್ರೆಗೆ ದಾಖಲಾಗಿದ್ದಾರೆ ಎನ್ನಲಾಗಿದೆ.