ಕಾರ್ಕಳ : ಮೂಡುಬಿದಿರೆಯ ಮೂಡುಕೊಣಾಜೆ ಗ್ರಾಮದಲ್ಲಿ ಕೈಕಂಜಿ ಪಡ್ಡು ಸೇತುವೆ ಬಳಿ ಮಾದಕ ವಸ್ತು ಗಾಂಜಾವನ್ನು ಮಾರಾಟಕ್ಕೆ ತೆರಳಿದ ವ್ಯಕ್ತಿಯನ್ನು ಪೊಲೀಸ್ ವೃತ್ತ ನಿರೀಕ್ಷಕ ಸಂದೇಶ್ ಪಿ.ಜಿ ನೇತೃತ್ವದ ಪೊಲೀಸರ ತಂಡ ವಶಕ್ಕೆ ಪಡೆದುಕೊಂಡಿದ್ದಾರೆ.
ಆರೋಪಿಯನ್ನು ಬೆಳ್ತಂಗಡಿ ತಾಲೂಕಿನ ಕೂವೆಟ್ಟು ಗ್ರಾಮದ ಮದ್ದಡ್ಕ ಚಿಲಿಂಬಿ ನಿವಾಸಿ ಮೊಹಮ್ಮದ್ ರಫೀಕ್( 38) ಎಂದು ಗುರುತಿಸಲಾಗಿದೆ.
ಗಾಂಜಾ ವ್ಯಸನಿಗಳಿಗೆ ಮಾದಕ ವಸ್ತು ಗಾಂಜಾವನ್ನು ಮಾರಾಟ ಮಾಡಲು ಪ್ರಯತ್ನಿಸುತ್ತಿದ್ದ ಆರೋಪಿ ರಫೀಕ್ ನನ್ನು ವಶಕ್ಕೆ ಪಡೆದು ಪತ್ರಾಂಕಿತ ಅಧಿಕಾರಿಯವರು ಅಂಗ ಶೋಧನೆ ನಡೆಸಿದಾಗ ಆತನಲ್ಲಿದ್ದ ಒಟ್ಟು 900ಗ್ರಾಂ ತೂಕದ ಗಾಂಜಾವನ್ನು ವಶ ಪಡಿಸಿಕೊಂಡಿದ್ದಾರೆ.
ಆರೋಪಿಯ ವಿರುದ್ಧ ಚಿಕ್ಕಮಂಗಳೂರು ಜಿಲ್ಲೆಯಲ್ಲಿ 3 ಪ್ರಕರಣ ದಾಖಲಾಗಿದ್ದು ಅಲ್ಲದೇ ಬೆಳ್ತಂಗಡಿ ಠಾಣೆಯಲ್ಲಿ ಗಾಂಜಾ ಮಾರಾಟಕ್ಕೆ ಸಂಬಂಧಿಸಿದಂತೆ 3 ಪ್ರಕರಣ ದಾಖಲಾಗಿದ್ದು ತನಿಖೆಯಲ್ಲಿದೆ ಎಂದು ತಿಳಿದಿದೆ.
ಆರೋಪಿ ಮೊಹಮ್ಮದ್ ರಫೀಕ್ ವಿರುದ್ಧ ಪ್ರಕರಣ ದಾಖಲಿಸಿ, ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದೆ. ಆರೋಪಿಯಿಂದ ವಶ ಪಡಿಸಕೊಂಡ ಒಟ್ಟು 900ಗ್ರಾಂ ಗಾಂಜಾದ ಮೊತ್ತ ರೂ. 22000 ಆಗಿದೆ ಎನ್ನಲಾಗಿದೆ..