ಬೆಳ್ತಂಗಡಿ ಮಲಂತಬೆಟ್ಟು  ಕಾಲೇಜಿನ ಅತಿಥಿ ಶಿಕ್ಷಕಿ ಭಾರತಿ ನಿಧನ

ಬೆಳ್ತಂಗಡಿ : 14 ವರ್ಷದ ಹಿಂದೆ ಭೀಕರ ರಸ್ತೆ ಅಪಘಾತವಾಗಿದ್ದು, ಗಂಭೀರ ಗಾಯಗೊಂಡು ಇಲ್ಲಿವರೆಗೂ ಚಿಂತಾಜನಕದ ಪರಿಸ್ಥಿತಿಯಲ್ಲಿ ಚಿಕಿತ್ಸೆ ಪಡೆಯುತಿದ್ದ ಕಳಿಯ ಗ್ರಾಮದ ಕು.ಭಾರತಿ ಮಂಗಳವಾರ ರಾತ್ರಿ ಸ್ವಗೃಹದಲ್ಲಿ ನಿಧನರಾಗಿದ್ದಾರೆ.

ಬೆಳ್ತಂಗಡಿ ತಾಲೂಕು ಕಳಿಯ ಗ್ರಾಮದ ಉಬರಡ್ಕ ನಿವಾಸಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷೆ ಲಕ್ಷ್ಮಿ ಅವರ ಪುತ್ರಿಯಾಗಿರುವ ಕಳಿಯ ಗ್ರಾಮದ ಕು.ಭಾರತಿ ಮೇಲಂತಬೆಟ್ಟು ಪದವಿಪೂರ್ವ ಕಾಲೇಜಿನ ಅತಿಥಿ ಉಪನ್ಯಾಸಕಿಯಾಗಿ ಸೇವೆಗೈದಿದ್ದಾರೆ.

2010ರ ಜುಲೈ 30ರಂದು ಬೆಳ್ತಂಗಡಿ ಅಯ್ಯಪ್ಪ ಮಂದಿರದ ಬಳಿ ಆಟೋ ರಿಕ್ಷಾದಲ್ಲಿ ಪ್ರಯಾಣಿಸುತ್ತಿದ್ದಾಗ ಮೂಡಿಗೆರೆ ಕಡೆಯಿಂದ ಬರುತ್ತಿದ್ದ ಪಿಕಪ್ ಆಟೋ ರಿಕ್ಷಾಕ್ಕೆ ಡಿಕ್ಕಿಯಾದ ಪರಿಣಾಮ  ಮೆಲಂತಬೆಟ್ಟು ಪ್ರಥಮ ದರ್ಜೆ ಕಾಲೇಜಿನ ಅತಿಥಿ ಶಿಕ್ಷಕಿಯರಾದ ಕು.ಜಯಮಾಲಾ ಮತ್ತು ಕು.ಭಾರತಿಯವರಗೆ ಅಪಘಾತವಾಗಿದೆ. ಈ ಹಿನ್ನಲೆ ಗಂಭೀರ ಗಾಯಗೊಂಡು ಜಯಮಾಲ ಸ್ಥಳದಲ್ಲೇ ಮೃತಪಟ್ಟಿದ್ದರು.































 
 

ಜಯಮಾಲ ಕೆ.ಎ.ಎಸ್. ಪರೀಕ್ಷೆ ಬರೆದಿದ್ದು ಮರಣೋತ್ತರವಾಗಿ ಬಂದ ಫಲಿತಾಂಶದಲ್ಲಿ ಜಯಮಾಲಾ ಕೆ.ಎ.ಎಸ್. ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದರು.

ಆದರೆ ಕು.ಭಾರತಿ ಅವರು 14 ವರ್ಷಗಳಿಂದ ಹಂತ ಹಂತವಾಗಿ ಆಸ್ಪತ್ರೆಯಲ್ಲಿ ಮತ್ತು ಮನೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಇದೀಗ ನಿಧನರಾದರು.

ಮೃತರು ತಾಯಿ ಹಾಗೂ ಸಹೋದರ, ಸಹೋದರಿಯರನ್ನು ಅಗಲಿದ್ದಾರೆ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top