17 ವರ್ಷದ ಬಾಲಕಿಗೆ ಮದುವೆ | ತಂದೆ, ತಾಯಿ, ಅತ್ತೆ, ಮಾವ ಹಾಗೂ ಗಂಡನಿಗೆ ಒಂದು ವರ್ಷ ಜೈಲು  ಶಿಕ್ಷೆ

ಮಂಗಳೂರು : ಕಾನೂನಿನ ವಿರುದ್ದವಾಗಿ 17 ವರ್ಷದ ಅಪ್ರಾಪ್ತ ಬಾಲಕಿಗೆ ಮದುವೆ ಮಾಡಿರುವ ಘಟನೆ ಮಂಗಳೂರಿನಲ್ಲಿ ನಡೆದಿದೆ.

 ಈ ಹಿನ್ನೆಲೆಯಲ್ಲಿ ಬಾಲ್ಯವಿವಾಹ ನಿಷೇಧ ಕಾಯ್ದೆಯಡಿ ದಾಖಲಾದ ಪ್ರಕರಣದ ಬಗ್ಗೆ ವಿಚಾರಣೆ ನಡೆಸಿದ ಮಂಗಳೂರಿನ ಹೆಚ್ಚುವರಿ ಜಿಲ್ಲಾ ಮತ್ತು ವಿಶೇಷ ಪೋಷ್ಟೋ ನ್ಯಾಯಾಲಯ ಆರೋಪಿತರಾದ ಬಾಲಕಿಯ ತಂದೆ, ತಾಯಿ, ಅತ್ತೆ, ಮಾವ ಹಾಗೂ ಗಂಡನಿಗೆ ಒಂದು ವರ್ಷ ಗಳ ಕಾಲ ಶಿಕ್ಷೆ ವಿಧಿಸಲು ನ್ಯಾಯಲಯ ತೀರ್ಪು ನೀಡಿದೆ.

ಉಳ್ಳಾಲ ತಾಲೂಕಿನ ಮಂಜನಾಡಿ ಗ್ರಾಮದ ಮೊಂಟೆಪದವು ನಿವಾಸಿ ಮಹಮ್ಮದ್ ಇಂತಿಯಾಜ್ (29), ಆತನ ತಂದೆ ಕೆ.ಐ ಮೊಹಮ್ಮದ್, ತಾಯಿ ಮೈಮೊನಾ. ಹುಡುಗಿ ತಂದೆ ಫರಂಗಿಪೇಟೆ ನಿವಾಸಿ ಅಬ್ದುಲ್ ಖಾದರ್ ಮತ್ತು ತಾಯಿ ರಮ್ಲತ್‍ ರವರಿಗೆ  ಒಂದು ವರ್ಷ ಶಿಕ್ಷೆಗೆ ಒಳಗಾಗಿದ್ದಾರೆ.































 
 

ಮೊಂಟೆಪದವು ಗ್ರಾಮದ ಹುಡುಗನ ಮನೆಯಲ್ಲಿ 2023ರ ಮೇ 31ರಂದು ಅಪ್ರಾಪ್ತ ಬಾಲಕಿಯನ್ನು ಮಹಮ್ಮದ್ ಇಂತಿಯಾಜ್ ಎಂಬ ಹುಡುಗನ ಜೊತೆಗೆ ಹುಡುಗನ ತಂದೆ, ತಾಯಿ ಮತ್ತು ಹುಡುಗಿಯ ತಂದೆ, ತಾಯಿ ಸಮ್ಮುಖದಲ್ಲಿಯೇ ಮದುವೆ ಮಾಡಿಸಿದ್ದರು.

ವಧುವಿಗೆ ಪ್ರಾಯ ಪೂರ್ತಿಯಾಗಿಲ್ಲ ಎಂಬ ಸುದ್ದಿ ಹರಡಿದ ಹಿನ್ನೆಲೆಯಲ್ಲಿ ಮರುದಿನ ಜೂ. 1ರಂದು ತನಿಖೆ ನಡೆಸಿದ ಮಂಗಳೂರಿನ ಪಾಂಡೇಶ್ವರ ಮಹಿಳಾ ಠಾಣೆ ಪೊಲೀಸರು ವರ ಮತ್ತು ವಧುವಿನ ತಂದೆ, ತಾಯಿ ಹಾಗೂ ಮದುವೆ ಗಂಡು ವಿರುದ್ಧ ಕೇಸು ದಾಖಲಿಸಿದ್ದರು.

ಮಹಿಳಾ ಠಾಣೆಯ ಇನ್ಸ್ ಪೆಕ್ಟರ್ ರಾಜೇಂದ್ರ ಬಿ. ಅವರು ತನಿಖೆ ಪೂರ್ತಿಗೊಳಿಸಿ ಫೋಕ್ಸ್‌ ಕಾಯ್ದೆಯ ಕಲಂ 6 ಮತ್ತು ಬಾಲ್ಯ ವಿವಾಹ ಕಾಯ್ದೆ ಕಲಂ 9, 10, 11ರಂದು ನ್ಯಾಯಾಲಯಕ್ಕೆ ದೋಷಾರೋಪ ಸಲ್ಲಿಸಿದ್ದರು. ಕೋರ್ಟಿನಲ್ಲಿ 10 ಸಾಕ್ಷಿದಾರರು ಮತ್ತು 22 ದಾಖಲೆಗಳನ್ನು ಪರಿಶೀಲಿಸಿ ಅಪರಾಧ ಸಾಬೀತಾಗಿದೆ ಎಂದು ನ್ಯಾಯಾಧೀಶ ಮಾನು ಕೆ.ಎಸ್ ತೀರ್ಪು ನೀಡಿದ್ದಾರೆ.

ಬಾಲ್ಯವಿವಾಹ ನಿಷೇಧ ಕಾಯ್ದೆಯಡಿ ಕಲಂ 10 ಮತ್ತು 11ರಡಿಯಲ್ಲಿ ಆರೋಪಿತರಿಗೆ ತಲಾ ಒಂದು ವರ್ಷ ಕಾಲ ಶಿಕ್ಷೆ ಮತ್ತು ತಲಾ 5 ಸಾವಿರ ದಂಡ ವಿಧಿಸಲಾಗಿದೆ. ಸಂತ್ರಸ್ತೆ ಪರವಾಗಿ ಸ್ಪೆಷಲ್ ಪಬ್ಲಿಕ್ ಪ್ರಾಸಿಕ್ಯೂಟರ್ ಕೆ.ಬದರಿನಾಥ ನಾಯರಿ ವಾದಿಸಿದ್ದರು. ಕೇಸು ದಾಖಲಾದ ಒಂದೂವರೆ ವರ್ಷದಲ್ಲಿ ಶಿಕ್ಷೆಯಾಗಿರುವುದು ವಿಶೇಷವಾಗಿದೆ ಎನ್ನಲಾಗಿದೆ

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top