ಮುಂಬಯಿಯಿಂದ ಗಾಂಜಾ ತಂದು ಮಾರಾಟ ಮಾಡುತ್ತಿದ್ದ ಆರೋಪಿ
ಮಂಗಳೂರು: ಡ್ರಗ್ಸ್ ಮುಕ್ತ ಮಂಗಳೂ ಮಾಡಲು ದಿಟ್ಟ ಕಾರ್ಯಾಚರಣೆ ನಡೆಸುತ್ತುರುವ ಪೊಲೀಸರು ಮಾದಕ ವಸ್ತು ಸಾಗಾಟದಲ್ಲಿ ತೊಡಗಿದ್ದ ವ್ಯಕ್ತಿಯೊಬ್ಬನನ್ನು ಬಂಧಿಸಿದ್ದು, 6.7 ಕೆಜಿ ಗಾಂಜಾ ವಶಕ್ಕೆ ಪಡೆದಿದ್ದಾರೆ. ಖಚಿತ ಮಾಹಿತಿ ಮೇರೆಗೆ ಮಂಗಳೂರು ಬಳಿಯ ಮೂಲ್ಕಿ ಬಪ್ಪನಾಡುವಿನಲ್ಲಿ ದಾಳಿ ನಡೆಸಿದ ಸಿಸಿಬಿ ಪೊಲೀಸರು ಅಖಿಲೇಶ್ (30) ಎಂಬ ವ್ಯಕ್ತಿಯನ್ನು ಬಂಧಿಸಿದ್ದಾರೆ.
ವಿದ್ಯಾರ್ಥಿಗಳು ಸೇರಿದಂತೆ ಜನರಿಗೆ ಮಾರಾಟ ಮಾಡುವ ಉದ್ದೇಶದಿಂದ ಅಖಿಲೇಶ್ ಮುಂಬಯಿಯಿಂದ ಮಂಗಳೂರಿಗೆ ಗಾಂಜಾ ತರಿಸಿಕೊಂಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಬಂಧಿತನಿಂದ ರೂ. 1.62 ಲಕ್ಷ ಮೌಲ್ಯದ 6.7 ಕೆಜಿ ಗಾಂಜಾ, ಒಂದು ಮೊಬೈಲ್ ಫೋನ್ ಹಾಗೂ ರೂ. 660 ನಗದು ವಶಕ್ಕೆ ಪಡೆಯಲಾಗಿದೆ. ಈ ಸಂಬಂಧ ಮೂಲ್ಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆರೋಪಿ ಮಂಗಳೂರಿಗೆ ರೈಲಿನಲ್ಲಿ ತೆರಳಿ ಸಾಕಷ್ಟು ಹಣವಿದ್ದು, ಲಕ್ಸುರಿ ಜೀವನ ನಡೆಸುತ್ತಿರುವರಿಗೆ ಗಾಂಜಾ ಮಾರಾಟ ಮಾಡುತ್ತಿದ್ದ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ. ಅಖಿಲೇಶ್ ವಿರುದ್ಧ ಕಳ್ಳತನ, ಡ್ರಗ್ ಸಾಗಾಟ, ಹಲ್ಲೆ ಸೇರಿದಂತೆ ಆರು ಕ್ರಿಮಿನಲ್ ಕೇಸ್ಗಳು ಮಂಗಳೂರು ಹಾಗೂ ಉಡುಪಿ ಜಿಲ್ಲೆಯಲ್ಲಿ ದಾಖಲಾಗಿವೆ ಎಂದು ಅವರು ಮಾಹಿತಿ ನೀಡಿದ್ದಾರೆ.