ಮಹಿಳೆಯ ಕುತ್ತಿಗೆಯಿಂದ ಕರಿಮಣಿ ಸರ ಎಳೆದು ಪರಾರಿಯಾದ ಆರೋಪಿಯ ಬಂಧನ

ಕೊಯ್ಯರು: ಮಹಿಳೆಯೊಬ್ಬರು ಮನೆಗೆ ನಡೆದುಕೊಂಡು ಹೋಗುತ್ತಿದ್ದ ವೇಳೆ ಹಿಂಬಾಲಿಸಿಕೊಂಡು ಬಂದು ಬೆದರಿಸಿ ಚಿನ್ನದ ಕರಿಮಣಿ ಸರವನ್ನು ಕಸಿದು ಪರಾರಿಯಾಗಿರುವ ಘಟನೆಗೆ ಸಂಬಂಧಿಸಿದಂತೆ ಆರೋಪಿಯನ್ನು ಬೆಳ್ತಂಗಡಿ ಪೊಲೀಸರು ಬಂಧಿಸಿದ್ದಾರೆ, ಕದ್ದೊಯ್ದ ಚಿನ್ನದ ಕರಿಮಣಿ ಸರವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಆರೋಪಿ ಬೆಳ್ತಂಗಡಿ ತಾಲೂಕಿನ ಕೊಯ್ಯರು ಗ್ರಾಮದ ಗಿರಿಗುಡ್ಡೆ, ಡೆಂಬುಗ ನಿವಾಸಿ ಉಮೇಶ್ ಗೌಡ(38) ಆರೋಪಿ ಎಂದು ತಿಳಿದು ಬಂದಿದ್ದು, ಆತನನ್ನು ಬೆಳ್ತಂಗಡಿ ಸರ್ಕಲ್ ಇನ್ಸೆಕ್ಟರ್ ನಾಗೇಶ್ ಕದ್ರಿ ನೇತೃತ್ವದ ತಂಡದ ಸಿಬ್ಬಂದಿಗಳು ಕೊಯ್ಯರು ಗ್ರಾಮದ ಆದೂರ್ ಪೆರಲ್ ಬಸ್ ನಿಲ್ದಾಣದಲ್ಲಿ ಡಿ.10 ರಂದು ಬೆಳಗ್ಗೆ ಬಂಧಿಸಿ ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಆರೋಪಿಗೆ ಬೆಳ್ತಂಗಡಿ ನ್ಯಾಯಾಲಯ ನ್ಯಾಯಾಂಗ ಬಂಧನ ವಿಧಿಸಿದೆ.

ಬೆಳ್ತಂಗಡಿ ತಾಲೂಕಿನ ಕೊಯ್ಯರು ಗ್ರಾಮದ ಕೋರಿಯಾರ್ ನಿವಾಸಿ ದಾಮೋಧರ್ ಭಟ್ ಅವರ ಪತ್ನಿ ರಾಜೀವಿ(50) ಎಂಬವರು ಡಿ.9 ರಂದು ಮಧ್ಯಾಹ್ನ 2:35 ರ ಸುಮಾರಿಗೆ ಬೆಳ್ತಂಗಡಿಗೆ ಹೋಗಿ ವಾಪಸ್ ಮನೆಗೆ ಹಿಂತಿರುಗುವಾಗ ಆರೋಪಿ ಉಮೇಶ್ ಗೌಡ ಎಂಬಾತ ಹಿಂದಿನಿಂದ  ಬಂದು ಮಹಿಳೆಯ ಕುತ್ತಿಗೆಯನ್ನು ಬಿಗಿಯಾಗಿ ಹಿಡಿದು ಬೊಬ್ಬೆ ಹಾಕಬೇಡಿ ಎಂದು ಬೆದರಿಸಿ ಕುತ್ತಿಗೆಯಲ್ಲಿದ್ದ 32 ಗ್ರಾಂ ಚಿನ್ನದ ಕರಿಮಣಿ ಸರವನ್ನು ಎಳೆದಿದ್ದಾನೆ.































 
 

ಈ ಸಂದರ್ಭದಲ್ಲಿ ಕೈಯಲ್ಲಿ ಗಟ್ಟಿಯಾಗಿ ಹಿಡಿದು ಬೊಬ್ಬೆ ಹಾಕಿದಾಗ ಕರಿಮಣಿ ಎಳೆದ ರಭಸಕ್ಕೆ ಕುತ್ತಿಗೆಹಾಗೂ  ಎದೆಗೆ ಗಾಯವಾಗಿದ್ದು, ಕರಿಮಣಿ ಎರಡು ತುಂಡಾಗಿದೆ. ಇದರಿಂದ ಒಂದು ತುಂಡು ಕರಿಮಣಿಯನ್ನು ಆರೋಪಿ ಉಮೇಶ್ ಗೌಡ ಸುಲಿಗೆ ಮಾಡಿಕೊಂಡು ಗುಡ್ಡದ ಕಡೆ ಪರಾರಿಯಾಗಿದ್ದಾನೆ. ಗಾಯಗೊಂಡ ರಾಜೀವಿ ಬೆಳ್ತಂಗಡಿ ತಾಲೂಕು ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದರು.

ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಸುಮಾರು ಒಂದು ಲಕ್ಷ ಮೌಲ್ಯದ 16 ಗ್ರಾಂ ಚಿನ್ನ ಸುಲಿಗೆ ಮಾಡಿರುವ ಬಗ್ಗೆ 309(6)BNS ಅಡಿಯಲ್ಲಿ ಆರೋಪಿ ಉಮೇಶ್ ಗೌಡ ವಿರುದ್ಧ ಪ್ರಕರಣ ದಾಖಲಾಗಿದೆ.

ಬೆಳ್ತಂಗಡಿ ಸರ್ಕಲ್ ಇನ್ಸ್ ಪೆಕ್ಟರ್ ನಾಗೇಶ್ ಕದ್ರಿ ನೇತೃತ್ವದಲ್ಲಿ ಬೆಳ್ತಂಗಡಿ ಪಿಎಸ್‌ಐ ಮುರಳೀಧರ್ ನಾಯ್ಕ ಮತ್ತು ಇತರ ಸಿಬ್ಬಂದಿಗಳು ಆರೋಪಿಯ ಪತ್ತೆ ಕಾರ್ಯಾಚರಣೆಯನ್ನು  ನಡೆಸಿದರು.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top