ಸುಬ್ರಹ್ಮಣ್ಯ : ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ಬಳಿಗೆ ಕಾಡಾನೆಯೊಂದು ಡಿ. 1 ರ ಸಂಜೆ 7.30 ಸುಮಾರಿಗೆ ಬಂದು ಮಠದ ಬಳಿ ಇದ್ದು ಮತ್ತೆ ಕಾಡು ಪ್ರವೇಶಿದ ಘಟನೆ ವರದಿಯಾಗಿದೆ.
ದೇವರಗದ್ದೆ ಅರಣ್ಯ ಪ್ರದೇಶ ಭಾಗದಿಂದ ಬಂದ ಒಂಟಿ ಕಾಡಾನೆ ಸುಬ್ರಹ್ಮಣ್ಯ ದೇವಸ್ಥಾನದ ಬಳಿಯಿರುವ ವ್ಯಾಸಮಂದಿರ ಬಳಿಗಾಗಿ ಬಂದು ಸಂಪುಟ ನರಸಿಂಹ ಸ್ವಾಮಿ ಶ್ರೀ ಸುಬ್ರಹ್ಮಣ್ಯ ಮಠದ ಹತ್ತಿರ ಬಂದಿದೆ.
ಅಲ್ಲಿ ಅಲ್ಪ ಕಾಲ ಇದ್ದು ಮತ್ತೆ ಅರಣ್ಯ ಭಾಗಕ್ಕೆ ತೆರಳಿರುವುದಾಗಿ ತಿಳಿದು ಬಂದಿದೆ. ಕಾಡಾನೆ ವ್ಯಾಸಮಂದಿರದ ಸಮೀಪದಿಂದ ಹಾದು ಹೋಗುವ ದೃಶ್ಯ ಸಿಸಿ ಕ್ಯಾಮರದಲ್ಲಿ ಸೆರೆಯಾಗಿದೆ.
ಕಾಡಾನೆ ಬರುವದನ್ನು ನೋಡಿ ಜನ ಅಡಗಿ ಕುಳಿತಿದ್ದಾರೆ. ದೇವಳದ ಸಮೀಪದ ಪರಿಸದಲ್ಲಿ ಆನೆ ಸಂಚರಿಸಿರುವುದು ಅಲ್ಲಿನ ಜನರಲ್ಲಿ ಆತಂಕ ಮೂಡಿಸಿತ್ತು. ಈ ಬಗ್ಗೆ ಅರಣ್ಯ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿತ್ತು. ಅವರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಅಲ್ಲದೆ ಆನೆ ಕಾಡಿಗೆ ತೆರಳಿರುವುದನ್ನು ಸ್ಪಷ್ಟ ಪಡಿಸಿದ್ದಾರೆ.