ಬಾಂಗ್ಲಾ ದೇಶದಲ್ಲಿ ಹಿಂದೂಗಳ ಮೇಲೆ ದೌರ್ಜನ್ಯ | ವಿಶ್ವ ಹಿಂದೂ ಪರಿಷದ್ ನಿಂದ ಖಂಡನೆ

ಪುತ್ತೂರು: ವಿಶ್ವದ ಹಿಂದೂ ಸಮುದಾಯ ಬಾಂಗ್ಲಾದೇಶದಲ್ಲಿ ಆಗುತ್ತಿರುವ ಹಿಂದೂಗಳ ಮೇಲಿನ ದೌರ್ಜನ್ಯವನ್ನು ಅತ್ಯಂತ ಉಗ್ರವಾಗಿ ಖಂಡಿಸಬೇಕಿದೆ ಎಂದು ವಿಶ್ವ ಹಿಂದೂ ಪರಿಷದ್ ಜಿಲ್ಲಾಧ್ಯಕ್ಷ ಡಾ.ಕೃಷ್ಣ ಪ್ರಸನ್ನ ತಿಳಿಸಿದ್ದಾರೆ.

ಇಸ್ಕಾನ್ ನ ಚಿನ್ಮಯ ಕೃಷ್ಣ ದಾಸರನ್ನು ಕೂಡಲೇ ಬಿಡುಗೊಡೆಗೊಳಿಸುವಂತೆ ಬಾಂಗ್ಲಾದ ಮತಾಂಧ ಸರ್ಕಾರವನ್ನು ವಿಶ್ವ ಹಿಂದೂ ಪರಿಷದ್ ಆಗ್ರಹಿಸಿದ್ದು, 70ರ ದಶಕದಲ್ಲಿ ಬಾಂಗ್ಲಾದೇಶ ಪಾಕಿಸ್ತಾನದಿಂದ ವಿಮೋಚನೆಯಾದಾಗ ಕಷ್ಟದಲ್ಲಿದ್ದ ಲಕ್ಷಾಂತರ ಬಾಂಗ್ಲಾದೇಶೀಯರಿಗೆ ಅನ್ನ ನೀಡಿ ಸಹಾಯ ಮಾಡಿದ ಇಸ್ಕಾನ್ ಸಂಸ್ಥೆಯನ್ನು ಗುರಿಯಾಗಿಸಿಕೊಂಡು ಮತಾಂಧ ಜಿಹಾದಿಗಳು ದಾಳಿ ಮಾಡಿ ದೌರ್ಜನ್ಯ ನಡೆಸುತ್ತಿವೆ.

ಹಿಂದೂಗಳ ಧ್ವನಿಯಾಗಿರುವ ಚಿನ್ಮಯ ಕೃಷ್ಣ ದಾಸರನ್ನು ಬಂಧಿಸಿರುವ ಅಲ್ಲಿನ ಸರ್ಕಾರಕ್ಕೆ ಅವರನ್ನು ಕೂಡಲೇ ಬಿಡುಗಡೆಗೊಳಿಸುವಂತೆ ವಿಶ್ವ ಹಿಂದೂ ಪರಿಷದ್ ಆಗ್ರಹಿಸುತ್ತದೆ.































 
 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top