ಸಾರ್ವಜನಿಕರಿಗೆ ಹಾದು ಹೋಗಲು ಭೂಗತ ಕಾಲುದಾರಿ ಬಗ್ಗೆ ಸಂಜೀವ ಮಠಂದೂರು ನೇತ್ರತ್ವದಲ್ಲಿ ಇಂಜಿನಿಯರ್ಗೆ ಮನವಿ ಸಲ್ಲಿಕೆ

ಪುತ್ತೂರು : ನೆಕ್ಕಿಲಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿಯ ಚತುಷ್ಪಥ ರಸ್ತೆಯ ಕಾಮಗಾರಿ ಪ್ರಗತಿಯಲ್ಲಿದ್ದು, ನೆಕ್ಕಿಲಾಡಿ ಗ್ರಾಮ ಪಂಚಾಯತ್ ಅಧ್ಯಕ್ಷ ಹಾಗೂ ಸದಸ್ಯರ  ಬೇಡಿಕೆ ಮೇರೆಗೆ ಸಾರ್ವಜನಿಕರಿಗೆ ಹಾದು ಹೋಗಲು ಭೂಗತ ಕಾಲುದಾರಿ ಹಾಗೂ ಸರ್ವಿಸ್ ರಸ್ತೆಯ ಡಾಮರೀಕರಣ  ಬಗ್ಗೆ ಮನವಿ ಮಾಡಲಾಯಿತು.

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹಾಗೂ ಕೆ.ಎನ್.ಆರ್ ಕನ್ಸ್ಟ್ರಕ್ಷನ್ ಇಂಜಿನಿಯರ್‌ಗಳಲ್ಲಿ ಮಾಜಿ ಶಾಸಕ ಸಂಜೀವ ಮಠಂದೂರು ಮೂಲಕ ಮನವಿ ನೀಡಲಾಯಿತು.

 ಈ ಸಂದರ್ಭದಲ್ಲಿ ಪಂಚಾಯತ್ ಸದಸ್ಯರಾದ ಪ್ರಶಾಂತ್ ಎನ್ ನೆಕ್ಕಿಲಾಡಿ,ಹರೀಶ್ ದರ್ಬೆ, ಗೀತ ವಾಸಪ್ಪ ಗೌಡ ಹಾಗೂ  ಬಿಜೆಪಿ ನಗರ ಮಂಡಲದ ಉಪಾಧ್ಯಕ್ಷರಾದ ಸುನಿಲ್ ದಡ್ಡು, ಸದಾನಂದ ನೆಕ್ಕಿಲಾಡಿ, ಉಪಸ್ಥಿತರಿದ್ದರು.































 
 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top