ಪೋಲಿಸರ ಹೆಸರಿನಲ್ಲಿ ಮಹಿಳೆಗೆ ಲಕ್ಷಾಂತರ ರೂ. ವಂಚನೆ

ಉಡುಪಿ: ಡಿಜಿಟಲ್  ಅರೆಸ್ಟ್ ಮುಖಾಂತರ ಪೊಲೀಸರ ಹೆಸರಿನಲ್ಲಿ ಮಹಿಳೆಯೊಬ್ಬರನ್ನು ಹೆದರಿಸಿ ಲಕ್ಷಾಂತರ ರೂ. ವಂಚಿಸಿದ್ದಾರೆ. ಈ  ಘಟನೆ ಉಡುಪಿ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ವಿದ್ಯಾ(53) ಎನ್ನುವವರಿಗೆ ಅ.4ರಂದು ಪೊಲೀಸ್ ಅಧಿಕಾರಿ ಎಂದು ಹೇಳಿ ಕರೆ ಮಾಡಿ,  ಆಧಾರ್ ಕಾರ್ಡ್ ಮೂಲಕ ಮುಂಬೈ ಬ್ಯಾಂಕ್‌ನಲ್ಲಿ ಖಾತೆ ತೆರೆದು, ಆ ಖಾತೆಗೆ ಹ್ಯುಮನ್ ಟ್ರಾಫಿಂಗ್ ಹಾಗೂ ಮನಿ ಲಾಂಡರಿಂಗ್ ಮೂಲಕ ಹಣವನ್ನು ವರ್ಗಾವಣೆ ಮಾಡಲಾಗಿದೆ. ಆದ್ದರಿಂದ ಎಲ್ಲಾ ಅಕೌಂಟ್ ಪರಿಶೀಲನೆ ಮಾಡಬೇಕು ಎಂದು  ತಿಳಿಸಿದ್ದರು.

ಅ.5ರಂದು ಮತ್ತೆ ವಿದ್ಯಾ ಅವರಿಗೆ ಕರೆ ಮಾಡಿ ಈ ಪ್ರಕರಣದಲ್ಲಿ ಬಂಧಿಸಲಾಗಿದ್ದು, ನೀವು ಎಲ್ಲಿಗೂ ಹೋಗುವಂತಿಲ್ಲ, ಎಲ್ಲಿಗೆ ಹೋಗುವುದಿದ್ದರೂ ನಮಗೆ ತಿಳಿಸಿಯೇ ಹೋಗಬೇಕೆಂಬುದಾಗಿ ಬೆದರಿಸಿದ್ದನು. ನಂತರ ಎಲ್ಲಾ ಅಕೌಂಟ್ ಪ್ರೀಜ್ ಆಗಿದ್ದು, ಆದ್ದರಿಂದ  ಅಕೌಂಟ್‌ನಲ್ಲಿದ್ದ ಹಣವನ್ನು ನಕಲಿ ಪೋಲಿಸ್‍್ ಹೇಳಿದ ಖಾತೆಗೆ ಕಳುಹಿಸಲು ತಿಳಿಸಿದ್ದನು. ಅದರಂತೆ ವಿದ್ಯಾ ಅ.16ರಿಂದ ನ.7ರ ತನಕ ಹಂತ ಹಂತವಾಗಿ ಒಟ್ಟು 19,71,679ರೂ. ಹಣವನ್ನು ವರ್ಗಾಯಿಸಿರುವುದಾಗಿ ದೂರಿನಲ್ಲಿ ತಿಳಿಸಿದ್ದಾರೆ.































 
 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top