ಮೃತ ಕೂಲಿ ಕಾರ್ಮಿಕ ಶಿವಪ್ಪ ಕೆರೆಮೂಲೆ ಸಾವು ಪ್ರಕರಣ | ಪ್ರಮುಖ ಆರೋಪಿಯನ್ನು ಬಂಧಿಸದಿದ್ದಲ್ಲಿ ನಾಳೆ ಪ್ರತಿಭಟನೆ : ಪತ್ರಿಕಾಗೋಷ್ಠಿಯಲ್ಲಿ ಆದಿ ದ್ರಾವಿಡ ಸಮಾಜ ಸೇವಾ ಸಂಘ

ಪುತ್ತೂರು: ಮೃತಪಟ್ಟ ಕೂಲಿ ಕಾರ್ಮಿಕ ಶಿವಪ್ಪ ಕೆರೆಮೂಲೆ ಎಂಬವರನ್ನ ರಸ್ತೆ ಬದಿ ಮಲಗಿಸಿ ಅವಮಾನಕಾರಿ ರೀತಿಯಲ್ಲಿ ಬಿಟ್ಟು ಹೋದ ಮಾಲಿಕ, ಪ್ರಮುಖ ಆರೋಪಿ ಹೆನ್ರಿ ತಾವ್ರೋರನ್ನು ಪುತ್ತೂರು ನಗರ ಠಾಣಾ ಪೊಲೀಸರು ಇನ್ನೂ ಬಂಧಿಸದೇ ಇರುವ ನಿಟ್ಟಿನಲ್ಲಿ ನ.22 ನಾಳೆ ಪುತ್ತೂರು ನಗರ ಠಾಣೆ ಎದುರು ಕರ್ನಾಟಕ ರಾಜ್ಯ ಆದಿ ದ್ರಾವಿಡ ಸಮಾಜ ಸೇವಾ ಸಂಘ ಪುತ್ತೂರು ತಾಲೂಕು ಘಟಕದ ವತಿಯಿಂದ ರಸ್ತೆ ತಡೆ ಮಾಡುವ ಮೂಲಕ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ತಾಲೂಕು ಅಧ್ಯಕ್ಷ ಬಾಬು ಮರಿಕೆ ತಿಳಿಸಿದ್ದಾರೆ.

ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಹೆನ್ರಿ ಅವರು ಶಿವಪ್ಪ ಅವರನ್ನು ಕೆಲಸಕ್ಕೆಂದು ಪಿಕಪ್ ವಾಹನದಲ್ಲಿ ಕರೆದುಕೊಂಡು ಹೋಗಿದ್ದಾರೆ. ಸ್ವಲ್ಪ ಹೊತ್ತಿನ ಬಳಿಕ ಅದೇ ಪಿಕಪ್ ವಾಹನದಲ್ಲಿ ಹೆನ್ರಿ ತಾವ್ರೋ, ಸ್ಕ್ಯಾನ್ನಿ ಹಾಗೂ ಅಪರಿಚಿತರೊಬ್ಬರು ಶಿವಪ್ಪರನ್ನ ಅವರ ಮನೆಯ ಮುಂಭಾಗದ ರಸ್ತೆಯಲ್ಲಿ ಮಲಗಿಸಿ ಹೋಗಿದ್ದಾರೆ. ತನ್ನ ಮಾಲಿಕತ್ವದ ಘಟಕದಲ್ಲಿ ಕೆಲಸಕ್ಕೆಂದು ಕರೆದುಕೊಂಡು ಹೋಗಿ ಅವರು ಅಸ್ವಸ್ಥರಾದಾಗ ಆಸ್ಪತ್ರೆಗೆ ಕೊಂಡೊಯ್ಯದೇ ಶಿವಪ್ಪನವರು ಮೃತಪಟ್ಟಿದ್ದಾರೆ. ಅಷ್ಟೇ ಅಲ್ಲದೇ ಅಮಾನವೀಯವಾಗಿ ಪಿಕ್ ಅಪ್ ವಾಹನದ ಹಿಂಭಾಗದಲ್ಲಿ ಮರದ ದಿಮ್ಮಿಗಳ ಮೇಲೆ ಮಲಗಿಸಿಕೊಂಡು ಮನೆಯ ಬಳಿಯೇ ಎಳೆದು ಹಾಕಿ ಹೋಗಿ ನಾಗರಿಕ ಸಮಾಜ ತಲೆ ತಗ್ಗಿಸುವಂತೆ ಮಾಡಿದ್ದಾರೆ ಎಂದು ಅವರು ಆರೋಪಿಸಿದರು.

ಘಟನೆಗೆ ಸಂಬಂಧಿಸಿ ಸ್ಮಾನ್ಲಿ ಎಂಬಾತನನ್ನ ಈಗಾಗಲೇ ಬಂಧಿಸಿದ್ದಾರೆ. ಆದ್ರೆ ಪಮುಖ ಆರೋಪಿ ಹೆನ್ರಿ ತಾವ್ರೋ ಅವರನ್ನು ಬಂಧಿಸಲಿಲ್ಲ. ಇದರಲ್ಲಿ ರಾಜಕೀಯ ಒತ್ತಡವಿದೆ. ಹೆನ್ರಿಯನ್ನ ಬಂಧಿಸದೇ ಇರುವ ಪುತ್ತೂರು ನಗರ ಠಾಣಾ ಪೊಲೀಸರ ಕಾರ್ಯ ವೈಖರಿ ಬಗ್ಗೆ ಅನುಮಾನವಿದೆ. ಇದರ ಹಿಂದೆ ರಾಜಕೀಯ ಒತ್ತಡವಿರುವುದು ನಮ್ಮ ಗಮನಕ್ಕೆ ಬಂದಿದೆ ಎಂದು ತಿಳಿಸಿದರು.



































 
 

ಇನ್ನು ಹೆನ್ರಿ ತಾವೋ ಅವರನ್ನು ಇಂದು ಸಂಜೆಯೊಳಗಡೆ ಬಂಧಿಸದೇ ಇದ್ದಲ್ಲಿ, ನಾಳೆ ಪುತ್ತೂರು ನಗರ ಪೊಲೀಸ್ ಠಾಣೆಯ ಮುಂದೆ ಬೃಹತ್ ಪ್ರತಿಭಟನೆಗೆ ಮುಂದಾಗಿದ್ದೇವೆ ಎಂದು  ತಿಳಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಸಂಘದ ಗೌರವಾಧ್ಯಕ್ಷ ಲೋಹಿತ್, ಯುವ ವೇದಿಕೆ ಅಧ್ಯಕ್ಷ ಮೋಹನ್ ಸಂಟ್ಯಾರ್, ಮೃತ ಶಿವಪ್ಪರ ಪುತ್ರಿ ಉಷಾ ಉಪಸ್ಥಿತರಿದ್ದರು.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top