ಸವಣೂರು : ಇಲ್ಲಿನ ವಿದ್ಯಾರಶ್ಮಿ ಪ್ರಥಮ ದರ್ಜೆ ಕಾಲೇಜಿನಲ್ಲಿ ವಾಣಿಜ್ಯ ವಿಭಾಗದ ವತಿಯಿಂದ “ಹೂಡಿಕೆ ಜಾಗೃತಿ” ಕಾರ್ಯಗಾರ ನಡೆಯಿತು.
ಕಾರ್ಯಗಾರವನ್ನು ಸಂಸ್ಥೆಯ ಉಪ ಪ್ರಾಂಶುಪಾಲ ಶೇಷಗಿರಿ ಎಂ. ಉದ್ಘಾಟಿಸಿದರು.
ಕಾರ್ಯಗಾರ 2 ಅವಧಿಯನ್ನು ಒಳಗೊಂಡಿದ್ದು ಸಂಪನ್ಮೂಲ ವ್ಯಕ್ತಿಯಾಗಿ ಎಮ್. ಎಫ್. ಐ ರಿಜ್ ಮ್ಯುಚ್ಯೂವಲ್ ಫಂಡ್ ಡಿಸ್ಟ್ರಿಬ್ಯೂಟರ್ ಮತ್ತು ಫಿನಾನ್ಶಿಯಲ್ ಎಡ್ವೈಸರ್ ನಿರಂಜನ್ ರೈ ಇಲಾವರು ಸ್ಟಾಕ್ ಮಾರ್ಕೆಟ್ ಮತ್ತು ಮ್ಯುಚ್ಚಲ್ ಫಂಡ್ ಎಂಬ ವಿಷಯಗಳ ಬಗ್ಗೆ ಮಾಹಿತಿ ನೀಡಿದರು.
ಅಧ್ಯಕ್ಷತೆಯನ್ನು ಪ್ರಾಂಶುಪಾಲ ಡಾ. ನಾರಾಯಣ ಮೂರ್ತಿ ಕೆ. ವಹಿಸಿದ್ದರು. ವಾಣಿಜ್ಯ ವಿಭಾಗದ ಸಂಘಟಕಿ ಅಶ್ವಿನಿ ಕೆ. ಉಪಸ್ಥಿತರಿದ್ದರು.
ವಿದ್ಯಾರ್ಥಿ ಸಂಘದ ಸಂಘಟಕಿ ಅಭಿಜ್ಞಾ ಸ್ವಾಗತಿಸಿ, ವಿದ್ಯಾರ್ಥಿನಿ ವಾತ್ಸಲ್ಯ ವಂದಿಸಿದರು. ವಿದ್ಯಾರ್ಥಿನಿ ಪ್ರೀತಿ ನಿರ್ವಹಿಸಿದರು. ಶ್ರಾವ್ಯವಾಣಿ ಪ್ರಾರ್ಥಿಸಿದರು.