ಸಂಪುಟದಿಂದ ಜಮೀರ್‌ ಖಾನ್‌ರನ್ನು ಕಿತ್ತು ಹಾಕಲು ಒಕ್ಕಲಿಗರ ಸಂಘ ಒತ್ತಾಯ

ಕುಮಾರಸ್ವಾಮಿಯವರನ್ನು ಕರಿಯ ಎಂದು ಹೀಯಾಳಿಸಿದ್ದ ಜಮೀರ್‌

ಬೆಂಗಳೂರು: ಕೇಂದ್ರ ಸಚಿವ ಎಚ್‌.ಡಿ ಕುಮಾರಸ್ವಾಮಿಯವರ ಮೈಬಣ್ಣದ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿರುವ ಸಚಿವ ಜಮೀರ್ ಅಹ್ಮದ್ ಖಾನ್ ಅವರನ್ನು ಸಂಪುಟದಿಂದ ಕೈಬಿಡಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ರಾಜ್ಯ ಒಕ್ಕಲಿಗರ ಸಂಘ ಒತ್ತಾಯಿಸಿದೆ.

ಈ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಸಂಘ ಹಾಗೂ ಸಭಾದ ಪದಾಧಿಕಾರಿಗಳು, ಕುಮಾರಸ್ವಾಮಿ ಅವರ ಮೈಬಣ್ಣದ ಬಗ್ಗೆ ಜಮೀರ್‌ ಆಡಿರುವ ಮಾತು ಅದು ಇಡೀ ಒಕ್ಕಲಿಗ ಜನಾಂಗಕ್ಕೆ ಮಾಡಿರುವ ಅವಹೇಳನ. ಇಂತಹ ಮಾತುಗಳು ಸಚಿವರಾದವರಿಗೆ ಶೋಭೆ ತರುವುದಿಲ್ಲ. ಸಭ್ಯತೆಯ ಎಲ್ಲೆ ಮೀರಿ ಮಾತನಾಡುವ ವ್ಯಕ್ತಿ ಸಚಿವ ಸ್ಥಾನದಲ್ಲಿ ಮುಂದುವರಿಯಬಾರದು ಎಂದು ಆಗ್ರಹಿಸಿದ್ದಾರೆ.







































 
 

ಜಮೀರ್ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಕುಟುಂಬದ ಬಗ್ಗೆಯೂ ಲಘುವಾಗಿ ಮಾತನಾಡಿದ್ದಾರೆ. ರಾಜಕೀಯವಾಗಿ ಯಾರಿಗೂ ನೋವಾಗದಂತೆ ಟೀಕೆ-ಟಿಪ್ಪಣಿ ಮಾಡಲು ಅಭ್ಯಂತರವಿಲ್ಲ. ಆದರೆ, ವ್ಯಕ್ತಿಗತ, ಸಮಾಜದ ಹಿತಕ್ಕೆ ಧಕ್ಕೆಯಾಗುವಂತೆ ವರ್ಣದ ಬಗ್ಗೆ ನಿಂದನೆ ಅವರ ಘನತೆಗೆ ತಕ್ಕದಾಗಿರಲಿಲ್ಲ. ತಮ್ಮ ಹೇಳಿಕೆಯನ್ನು ಮಾಧ್ಯಮಗಳ ಮೂಲಕ ಮತ್ತೆ ಸಮರ್ಥನೆ ಮಾಡಿಕೊಂಡಿದ್ದಾರೆ. ಒಕ್ಕಲಿಗ ಸಮಾಜ ಇಂತಹ ನಡೆಯನ್ನು ಸಹಿಸುವುದಿಲ್ಲ ಎಂದು ಹೇಳಿದ್ದಾರೆ.
ವಕ್ಫ್‌ಬೋರ್ಡ್‌ ಮೂಲಕ ಹಿಂದೂಗಳ ಭೂಮಿ ಕಬಳಿಸಲು ಯತ್ನಿಸುತ್ತಿರುವ ಸಚಿವ ಜಮೀರ್‌ ಅಹಮದ್‌ ಖಾನ್‌ ಇದೇ ರೀತಿ ಮಾತು ಮುಂದುವರಿಸಿದರೆ ಒಕ್ಕಲಿಗರು ಬೀದಿಗಿಳಿಯಬೇಕಾಗುತ್ತದೆ ಎಂದು ಇದೇ ವೇಳೆ ಎಚ್ಚರಿಕೆ ನೀಡಿದ್ದಾರೆ.

ಟೀಕಿಸುವ ಭರದಲ್ಲಿ ಕುಮಾರಸ್ವಾಮಿಯವರನ್ನು ಜಮೀರ್‌ ಕಾಲಿಯಾ (ಕರಿಯ) ಎಂದು ಕರೆದಿದ್ದರು. ಇದು ದೊಡ್ಡ ವಿವಾದವಾಗಿ ಮಾರ್ಪಟ್ಟಿದ್ದು, ಜಮೀರ್‌ ವಿರುದ್ಧ ಜನಾಂಗೀಯ ನಿಂದನೆ ಆರೋಪ ಮಾಡಲಾಗಿದೆ. ಜಮೀರ್‌ ಕ್ಷಮೆ ಯಾಚಿಸಿದ್ದರೂ ವಿವಾದ ತಣ್ಣಗಾಗಿಲ್ಲ.

1 thought on “ಸಂಪುಟದಿಂದ ಜಮೀರ್‌ ಖಾನ್‌ರನ್ನು ಕಿತ್ತು ಹಾಕಲು ಒಕ್ಕಲಿಗರ ಸಂಘ ಒತ್ತಾಯ”

  1. ವಸಂತ್ ಶಂಕರ್

    ಪ್ರೀತಿಯಿಂದ ಕರಿಯ ಕುಳ್ಳ ಎಂದು ಪರಸ್ಪರ ಸಂಭಾಷಣೆಯಲ್ಲಿ ಬಳಸಬಹುದು. ಆದರೆ ಸಾರ್ವಜನಿಕ ವಾಗಿ ಕರಿಯ ಎನ್ನುತ್ತಾರೆಯೇ

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top