ಬಿಳಿಯೂರು ಒಂದನೆ ವಾರ್ಡು ಉಪಚುನಾವಣೆಗೆ ಬಿಜೆಪಿ ಅಭ್ಯರ್ಥಿ ಪ್ರತಿಮಾ ರಾಜೀವ ನಾಮಪತ್ರ ಸಲ್ಲಿಕೆ

ಪುತ್ತೂರು ವಿಧಾನಸಭಾ ಕ್ಷೇತ್ರದ ಬಂಟ್ವಾಳ ತಾಲೂಕಿನ ಪೆರ್ಣೆ ಬಿಳಿಯೂರು ಪಂಚಾಯತಿನ ಬಿಳಿಯೂರಿನ ಒಂದನೇ ವಾರ್ಡಿನ ಉಪಚುನಾವಣೆಗೆ ಅಭ್ಯರ್ಥಿಯಾಗಿ ಪ್ರತಿಮಾ ರಾಜೀವ ರವರು ಬಿಜೆಪಿ ಬೆಂಬಲಿತ  ಉಮೇದುದಾರರಾಗಿ ನಾಮಪತ್ರ ಸಲ್ಲಿಸಿದರು.

ಬಿಳಿಯೂರು ಪಂಚಾಯಿತಿಗೆ ತೆರಳಿ ಅಲ್ಲಿ ನಾಮಪತ್ರ ಸಲ್ಲಿಸಿದರು.

ಈ ಸಂದರ್ಭದಲ್ಲಿ ಗ್ರಾಮಾಂತರ ಮಂಡಲ ಅಧ್ಯಕ್ಷ ದಯಾನಂದ ಶೆಟ್ಟಿ, ಮಾಜಿ ಶಾಸಕ ಸಂಜೀವ ಮಠಂದೂರು, ಮಂಡಲ ಉಪಾಧ್ಯಕ್ಷರುಗಳಾದ ಹರಿಪ್ರಸಾದ್ ಯಾದವ್, ವಿದ್ಯಾಧರ್ ಜೈನ್, ಮಂಡಲ ಕಾರ್ಯದರ್ಶಿ ಪುನೀತ್ ಮಾಡತ್ತಾರು, ಮಹಾಶಕ್ತೀ ಕೇಂದ್ರ ಅಧ್ಯಕ್ಷ ರಾಜೇಶ್ ಬಾಳೆಕಲ್ಲು,ಕಾರ್ಯದರ್ಶಿ ಕಿರಣ್ ಶೆಟ್ಟಿ, ಶಕ್ತೀ ಕೇಂದ್ರ ಸಂಚಾಲಕ ರಮೇಶ್ ತೋಟ, ಪಂಚಾಯತು ಸದಸ್ಯರಾದ ನವೀನ್ ಪದೆಬರಿ, ಕೇಶವ ಸುಣ್ಣಾನ, ಪ್ರಕಾಶ್ ನಾಯಕ್, ಬೂತ್ ಅಧ್ಯಕ್ಷ ಜಯಕೀರ್ತಿ, ಮಹೇಶ್ ಪಡಿವಾಳ್, ಪಕ್ಷದ ಬೂತ್ ಪ್ರಮುಖರು, ಗ್ರಾಮ ಪ್ರಮುಖರು ಉಪಸ್ಥಿತರಿದ್ದರು.







































 
 

ಈ ಹಿಂದಿನ ಕಾಂಗ್ರೇಸ್ ಬೆಂಬಲಿತ ಅಭ್ಯರ್ಥಿ ವಿದೇಶಕ್ಕೆ ಹೋದ ನಿಟ್ಟಿನಲ್ಲಿ ಉಪಚುನಾವಣೆ ನಡೆಯಲಿದೆ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top