ಪುತ್ತೂರು: ಬೆಂಗಳೂರು, ಮಂಗಳೂರಿನಲ್ಲಿ ಲಭ್ಯವಿರುವ ಅತ್ಯಾಧುನಿಕ ಶಸ್ತ್ರಚಿಕಿತ್ಸೆಯ ಮಾದರಿಯ ಶಸ್ತ್ರಚಿಕಿತ್ಸೆಯನ್ನು ಪುತ್ತೂರಿನ ಪ್ರಗತಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಫೆ. 25ರ ಮಹಾಶಿವರಾತ್ರಿಯ ಶುಭಗಳಿಗೆಯಲ್ಲಿ ನೆರವೇರಿಸಲಾಯಿತು.
ಉತ್ತಮ, ಅತ್ಯಾಧುನಿಕ ಪರಿಕರಗಳನ್ನು ಒಳಗೊಂಡ ಮಾಡ್ಯುಲರ್ ಆಪರೇಷನ್ ಥಿಯೇಟರ್ ಇತ್ತೀಚೆಗಷ್ಟೇ ಪುತ್ತೂರಿನ ಪ್ರಗತಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಲೋಕಾರ್ಪಣೆಗೊಂಡಿತ್ತು.
ಜಿಲ್ಲಾ ಕೇಂದ್ರದ ಸಿದ್ಧತೆಯಲ್ಲಿರುವ ಪುತ್ತೂರಿಗೆ ಮಾಡ್ಯುಲರ್ ಆಪರೇಷನ್ ಥಿಯೇಟರ್ ಪ್ರಮುಖ ಆದ್ಯತೆಗಳಲ್ಲೊಂದು. ರೋಗಿಗಳ ದೇಹಸೂಕ್ಷ್ಮತೆಗೆ ಅನುಗುಣವಾಗಿ ಆಪರೇಷನ್ ಥಿಯೇಟರ್ ಅನ್ನು ರಚಿಸಲಾಗಿರುತ್ತದೆ. ಅತ್ಯಾಧುನಿಕ ಯಂತ್ರೋಪಕರಣಗಳ ಮೂಲಕ ಆಪರೇಷನ್ ನಡೆಸುವುದು ಇಲ್ಲಿನ ವಿಶೇಷತೆ.