ಎಸ್‌ಡಿಎ ಆತ್ಮಹತ್ಯೆ ಪ್ರಕರಣ : ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ಪಿಎ ವಿರುದ್ಧ ಕೇಸ್‌

ತಹಶೀಲ್ದಾರ್‌ ಕಚೇರಿಯಲ್ಲೇ ಸಾವಿಗೆ ಶರಣಾಗಿದ್ದ ಎಸ್‌ಡಿಎ ರುದ್ರಣ್ಣ

ಬೆಳಗಾವಿ: ಎಸ್‌ಡಿಎ ರುದ್ರಣ್ಣ ಆತ್ಮಹತ್ಯೆ ಪ್ರಕರಣ ಈಗ ಪ್ರಭಾವಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ಅವರಿಗೆ ಸಂಕಟ ತಂದೊಡ್ಡಿದೆ. ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್‌ ಅವರ ಪಿಎ ಮತ್ತು ಬೆಳಗಾವಿಯ ತಹಶೀಲ್ದಾರ್‌ ವಿರುದ್ಧ ಪ್ರಕರಣ ದಾಖಲಾಗಿದೆ.
ರುದ್ರಣ್ಣ ಅವರ ತಾಯಿ ಮಲ್ಲವ್ವ ನೀಡಿದ ದೂರಿನನ್ವಯ ತಹಶೀಲ್ದಾರ್‌ ಬಸವರಾಜ ನಾಗರಾಳ, ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಪಿಎ ಸೋಮು ಮತ್ತು ಸಹೋದ್ಯೋಗಿ ಅಶೋಕ ಕಬ್ಬಲಿಗೇರ್ ವಿರುದ್ಧ ಬೆಳಗಾವಿಯ ಖಡೇಬಜಾರ್ ಪೊಲೀಸ್ ಠಾಣೆಯಲ್ಲಿ ಬಿಎನ್‌ಎಸ್‌ ಸೆಕ್ಷನ್‌ ಅಡಿ ಪ್ರಕರಣ ದಾಖಲಾಗಿದೆ.
ಪ್ರಕರಣ ‌ದಾಖಲಾಗುತ್ತಿದ್ದಂತೆ‌‌ ಮೂವರು ಆರೋಪಿಗಳು ನಾಪತ್ತೆ ಆಗಿದ್ದು, ಅವರ ಬಂಧನಕ್ಕೆ‌ ವಿಶೇಷ ‌ತಂಡ‌ವನ್ನು ನಗರ ಪೊಲೀಸ್ ‌ಆಯುಕ್ತ‌ ಯಡಾ ಮಾರ್ಟಿನ್ ರಚಿಸಿದ್ದಾರೆ.
ವಾಟ್ಸಪ್‌ನಲ್ಲಿ ನನ್ನ ಸಾವಿಗೆ ಮೂರು ಜನ ಕಾರಣ ಎಂದು ಬರೆದು ನಿನ್ನೆ ಬೆಳಗ್ಗೆ ತಹಶೀಲ್ದಾರ್‌ ಕಚೇರಿಯಲ್ಲಿ, ತಹಶೀಲ್ದಾರ್‌ ನ್ಯಾಯ ತೀರ್ಮಾನ ಮಾಡುವ ಪೀಠದ ಪಕ್ಕವೇ ರುದ್ರಣ್ಣ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದರು.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top