ಎಡನೀರು ಶ್ರೀಗಳ ಮೇಲಿನ ದಾಳಿ ಕೇರಳದಲ್ಲಿ ಪಿಣರಾಯಿ ಸರಕಾರದ ಹಿಂದೂ ವಿರೋಧಿ ಧೋರಣೆ : ದಯಾನಂದ ಶೆಟ್ಟಿ ಉಜಿರೆಮಾರು

ಪುತ್ತೂರು: ಹಿಂದೂ ಸಮಾಜ ಪೂಜನೀಯ ಭಾವನೆಯಲ್ಲಿ ಕಾಣುವ ಎಡನೀರು ಸಂಸ್ಥಾನದ ಶ್ರೀಗಳ ವಾಹನವನ್ನು ಅಡ್ಡಗಟ್ಟಿ ದಾಳಿ ಮಾಡಿರುವುದು  ಹಿಂದೂ ಸಮಾಜದ ಭಾವನೆಯನ್ನು ಕೆರಳಿಸಿರುವುದಾಗಿದೆ ಎಂದು ಪುತ್ತೂರು ಬಿಜೆಪಿ ಗ್ರಾಮಾಂತರ ಮಂಡಲ ಅಧ್ಯಕ್ಷ ದಯಾನಂದ ಶೆಟ್ಟಿ ಉಜಿರೆಮಾರು ಆರೋಪಿಸಿದ್ದಾರೆ.

ಕೇರಳ ರಾಜ್ಯಾದ್ಯಂತ ನಡೆಯುವ ಇಂತಹ ಘಟನೆಗಳು ಕೇರಳದಲ್ಲಿನ ಪಿಣರಾಯಿ ಸರಕಾರದ ಹಿಂದೂ ವಿರೋಧಿ ಧೋರಣೆಗೆ ಹಿಡಿದ ಕೈಗನ್ನಡಿಯಾಗಿದೆ. ಈ ಘಟನೆಯನ್ನು ಭಾರತೀಯ  ಜನತಾ ಪಾರ್ಟಿ ತೀವ್ರವಾಗಿ ಖಂಡಿಸುತ್ತದೆ ಎಂದಿದ್ದಾರೆ.

ತಪ್ಪಿತಸ್ಥರನ್ನು ತಕ್ಷಣ ಬಂಧಿಸಿ ಕಠಿಣ ಕಾನೂನು ಕ್ರಮ ಜರಗಿಸಬೇಕೆಂದು ಬಿಜೆಪಿ ಆಗ್ರಹಿಸುತ್ತದೆ.





































 
 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top