ಸವಣೂರು ಕೆನರಾ ಬ್ಯಾಂಕ್‍ ಶಾಖೆಯಲ್ಲಿ ಸೇವಾ ನ್ಯೂನತೆ | ಸರಿಪಡಿಸುವಂತೆ ಆಗ್ರಹಿಸಿ ಗ್ರಾಹಕರಿಂದ ಪ್ರತಿಭಟನೆ

ಸವಣೂರು : ಕೆನರಾ ಬ್ಯಾಂಕ್ ಸವಣೂರು ಶಾಖೆಯಲ್ಲಿ ನಡೆಯುತ್ತಿರುವ ಸೇವಾ ನ್ಯೂನತೆಗಳನ್ನು ಸರಿಪಡಿಸುವಂತೆ ಆಗ್ರಹಿಸಿ ಬ್ಯಾಂಕ್ ಎದುರು ಗ್ರಾಹಕರಿಂದ ಪ್ರತಿಭಟನೆ ಇಂದು ನಡೆಯಿತು.

ಸವಣೂರಿನ ಕೆನರಾ ಬ್ಯಾಂಕ್ ಶಾಖೆಯಲ್ಲಿ ಸರಿಯಾದ ಸೇವೆ ದೊರಕದೆ ಗ್ರಾಹಕರು ಪರದಾಡುವಂತಾಗಿದೆ. ಹಲವಾರು ಬಾರಿ ಬ್ಯಾಂಕ್‌ನ ಶಾಖಾಧಿಕಾರಿಗಳು, ಉನ್ನತ ಅಧಿಕಾರಿಗಳ ಗಮನಕ್ಕೆ ತಂದರೂ ಸೇವೆಯಲ್ಲಿ ಯಾವುದೇ ಸುಧಾರಣೆ ಆಗಿರುವುದಿಲ್ಲ. ಹಿರಿಯ ಗ್ರಾಹಕರು, ಮಹಿಳೆಯರು, ವಿದ್ಯಾರ್ಥಿಗಳು ಸೇರಿದಂತೆ ಸವಣೂರು ಹಾಗೂ ಅಕ್ಕಪಕ್ಕದ ಗ್ರಾಮಗಳ ಗ್ರಾಹಕರಿಗೆ ಆಗುತ್ತಿರುವ ಸಮಸ್ಯೆಗಳನ್ನು ತಕ್ಷಣ ಪರಿಹರಿಸಿ ಗುಣಮಟ್ಟದ ಗ್ರಾಹಕ ಸ್ನೇಹಿ ಸೇವೆಯಲ್ಲಿ ಒದಗಿಸುವಂತೆ ಪ್ರತಿಭಟನಾಕಾರರು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಸವಣೂರು ಸೀತಾರಾಮ ರೈ ರಾಕೇಶ್ ರೈ ಕಡೆಂಜಿ, ಮಹೇಶ್ ಕೆ.ಸವಣೂರು, ಗಿರಿಶಂಕರ ಸುಲಾಯ, ಎಂ.ಎ.ರಫೀಕ್, ಸುರೇಶ್ ರೈ ಸೂಡಿಮುಳ್ಳು, ಅಶ್ವಿನ್ ಎಲ್ ಶೆಟ್ಟಿ ಬ್ಯಾಂಕ್‍ ಅಧಿಕಾರಿಗಳಿಗೆ ಮನವಿ ನೀಡಿದರು.



































 
 

ಈ ಸಂದರ್ಭದಲ್ಲಿ ಬ್ಯಾಂಕ್ ಅಧಿಕಾರಿಗಳು ಸಮಸ್ಯೆ ಸರಿಪಡಿಸುವ ಕುರಿತು ಭರವಸೆ ನೀಡಿದರು. ಬಳಿಕ ಪ್ರತಿಭಟನೆಯನ್ನು ಹಿಂತೆಗೆದುಕೊಳ್ಳಲಾಯಿತು. ಮುಂದಿನ 15 ದಿನಗಳೊಳಗೆ ಸಮಸ್ಯೆ ಪರಿಹಾರವಾಗದಿದ್ದರೆ ಬೃಹತ್ ಹೋರಾಟ ನಡೆಸುವುದಾಗಿ ಗ್ರಾಹಕರು ಅಧಿಕಾರಿಗಳಿಗೆ ಸೂಚಿಸಿರುವುದಾಗಿ ತಿಳಿದು ಬಂದಿದೆ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top