ಪುತ್ತೂರು : ಪುತ್ತೂರು ವಿಧಾನಸಭಾ ಕ್ಷೇತ್ರದ ಜಾತ್ಯಾತೀಯ ಜನತಾದಳದ ಅಲ್ಪಸಂಖ್ಯಾತ ಘಟಕ, ಯುವ ಘಟಕ ಹಾಗೂ ನಗರದ ಜನತಾದಳದ ಕಾರ್ಯಕರ್ತರ ಸಭೆ ಫೆ.20 ಸೋಮವಾರ ಬೆಳಿಗ್ಗೆ 10.30 ಕ್ಕೆ ನಗರದ ಲಯನ್ಸ್ ಸೇವಾ ಮಂದಿರದಲ್ಲಿ ನಡೆಯಲಿದೆ.
ಮುಂದಿನ ಚುನಾವಣೆ ಹಿನ್ನಲೆಯಲ್ಲಿ ಪುತ್ತೂರು ವಿಧಾಸಭಾ ಕ್ಷೇತ್ರದಲ್ಲಿ ಸಿದ್ಧತೆಗಳನ್ನು ನಡೆಸುವ ಹಿನ್ನಲೆಯಲ್ಲಿ ಸಭೆ ಅಯೋಜಿಸಲಾಗಿದೆ.
ಜನತಾದಳ ಮುಖಂಡರು, ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕೆಂದು ಜನತಾದಳ ಪ್ರಕಟಣೆಯಲ್ಲಿ ತಿಳಿಸಿದೆ.