ದಿ. ಜಯಂತಿ ಸ್ಮರಣಾರ್ಥ ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ಸಹಯೋಗದಲ್ಲಿ ಅಪಘಾತದಲ್ಲಿ ಗಾಯಗೊಂಡ ಚೇತಕ್ ಅವರಿಗೆ ಬೆಡ್ ಹಸ್ತಾಂತರ

ಪುತ್ತೂರು: ಇತ್ತೀಚೆಗೆ ನಿಧನರಾದ ಸ್ವರ್ಗಸ್ಥರಾದ ನೆಹರೂನಗರದ ಗಣೇಶ್ ಭಾಗ್ ನಿವಾಸಿ ಜಯಂತಿ ಅವರ ಸ್ಮರಣಾರ್ಥ ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ನ ಸಹಯೋಗದಿಂದ ರಸ್ತೆ ಅಪಘಾತದಲ್ಲಿ ತೀವ್ರ ಗಾಯಗೊಂಡು ಮನೆಯಲ್ಲಿ ಚೇತರಿಸಿಕೊಳ್ಳುತ್ತಿರುವ ಕುಂಜೂರು ಪಂಜ ನಿವಾಸಿ ತಿಮ್ಮಪ್ಪ ನಾಯ್ಕ ಅವರ  ಪುತ್ರ ಚೇತಕ್ ಅವರಿಗೆ 20 ಸಾವಿರ ಮೌಲ್ಯದ ವೈದ್ಯಕೀಯ ವಿನ್ಯಾಸದ ಆಸ್ಪತ್ರೆ ಬೆಡ್ ಹಸ್ತಾಂತರಿಸಲಾಯಿತು.

ಚೇತಕ್ ಅವರು ಪ್ರಸ್ತುತ ಪುತ್ತೂರು ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ

ಈ ಸಂಧರ್ಭದಲ್ಲಿ ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ನ ಸಂಸ್ಥಾಪಕ ಅರುಣ್ ಕುಮಾರ್ ಪುತ್ತಿಲ, ದಿ. ಜಯಂತಿ ಅವರ ಪುತ್ರ ಉಮೇಶ್, ಸೇವಾ ಟ್ರಸ್ಟ್ ನ ಪ್ರಧಾನ ಕಾರ್ಯದರ್ಶಿ ರವಿ ಕುಮಾರ್ ರೈ ಕೆದಂಬಾಡಿ ಮಠ, ಹರೀಶ್ ಮರುವಾಳ, ಪ್ರಜ್ವಲ್ ಘಾಟೆ ಉಪಸ್ಥಿತರಿದ್ದರು.









































 
 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top