ವಲಯ ಮಟ್ಟದ ಕ್ರೀಡಾಕೂಟ : ಸವಣೂರು ವಿದ್ಯಾರಶ್ಮಿ ವಿದ್ಯಾಲಯದ ವಿದ್ಯಾರ್ಥಿಗಳು ತಾಲೂಕು ಮಟ್ಟಕ್ಕೆ       

ಸವಣೂರು: ಪಟ್ಟೆ ವಿದ್ಯಾಸ೦ಸ್ಥೆಯಲ್ಲಿ ನಡೆದ ಸವಣೂರು ವಲಯ ಮಟ್ಟದ ಕ್ರೀಡಾಕೂಟದಲ್ಲಿ ವಿದ್ಯಾರಶ್ಮಿ ವಿದ್ಯಾಲಯದ ವಿದ್ಯಾರ್ಥಿ ಮೂವರು  ತಾಲೂಕು ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ.

ವಿದ್ಯಾರ್ಥಿಗಳಾದ 7ನೇ ತರಗತಿಯ ಮಿಲನ್ ಜಿ. 100 ಮೀ. ಮತ್ತು 200 ಮೀ. ಓಟದಲ್ಲಿ ಪ್ರಥಮ ಸ್ಥಾನ, ಗು೦ಡೆಸೆತದಲ್ಲಿ ತೃತೀಯ, 8ನೇ ತರಗತಿಯ ಹೃತೇಶ್ ಬಿ.ಎಸ್. 200 ಮೀ ಓಟದಲ್ಲಿ ದ್ವಿತೀಯ, ಮತ್ತು 100 ಮೀ. ಓಟದಲ್ಲಿ ತೃತೀಯ,  10ನೇ ತರಗತಿಯ ಮಹಮ್ಮದ್ ಶಮ್ಮಾಸ್ 400 ಮೀ ಓಟದಲ್ಲಿ ತೃತೀಯ ಸ್ಥಾನ ಗಳಿಸಿ ತಾಲೂಕು ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.

14 ವರ್ಷದೊಳಗಿನ ಬಾಲಕರ ವಿಭಾಗದ ರಿಲೇಯಲ್ಲಿ ಸುಹೈಲ್, ಶಾಝಿನ್, ಮಹಮ್ಮದ್ ಆಸಿಮ್ ತೃತೀಯ ಸ್ಥಾನ, 17 ವರ್ಷದೊಳಗಿನ ಬಾಲಕರ ವಿಭಾಗದ ರಿಲೇಯಲ್ಲಿ  ದಿಲನ್, ಶಾಮಿಲ್, ವಿಘ್ನೇಶ್ ಶೆಟ್ಟಿ ದ್ವಿತೀಯ ಸ್ಥಾನ ಪಡೆದಿದ್ದಾರೆ.





































 
 

ವಿದ್ಯಾರ್ಥಿಗಳನ್ನು ಶಾಲಾ ಸ೦ಚಾಲಕ ಸವಣೂರು ಸೀತಾರಾಮ ರೈ, ಆಡಳಿತಾಧಿಕಾರಿ ಅಶ್ವಿನ್ ಎಲ್. ಶೆಟ್ಟಿ, ಪ್ರಾ೦ಶುಪಾಲೆ  ಶಶಿಕಲಾ ಆಳ್ವ ಮತ್ತು ಸಿಬ್ಬ೦ದಿ ವರ್ಗದವರು ಅಭಿನ೦ದಿಸಿದ್ದಾರೆ. 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top