ಶಾಸ್ತ್ರೀಯ ಸಂಗೀತ ಸ್ಪರ್ಧೆ : ಫಿಲೋಮಿನಾ ಪ ಪೂ ಕಾಲೇಜಿನ ಪ್ರಾರ್ಥನಾ ಬಿ. ಪ್ರಥಮ


ಪುತ್ತೂರು: ಮಂಗಳೂರು ಸಂಗೀತ ಪರಿಷತ್ತು ಆಶ್ರಯದಲ್ಲಿ ಭಾರತೀಯ ವಿದ್ಯಾಭವನದ ಸಹಯೋಗದೊಂದಿಗೆ  ನಡೆದ ಕರ್ನಾಟಕ ಶಾಸ್ತ್ರೀಯ ಸಂಗೀತ ಸೀನಿಯರ್ ವಿಭಾಗದ ಹಾಡುಗಾರಿಕೆ ಸ್ಪರ್ಧೆಯಲ್ಲಿ ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜಿನ ದ್ವಿತೀಯ ವಿಜ್ಞಾನ ವಿಭಾಗದ ಪ್ರಾರ್ಥನಾ ಬಿ. ಪ್ರಥಮ ಸ್ಥಾನ ಪಡೆದಿದ್ದಾರೆ.

ಪ್ರಾರಂಭದಲ್ಲಿ ವಿದುಷಿ ಡಾ. ಸುಚಿತ್ರಾ ಹೊಳ್ಳ ಅವರಲ್ಲಿ ಸಂಗೀತ ಅಭ್ಯಾಸವನ್ನು ಮಾಡಿದ್ದು, ಪ್ರಸ್ತುತ  ಚೆನ್ನೈ ನ ಕಲೈಮಾಮಣಿ ಡಾ. ಎಸ್ ಸುಂದರ್ ಹಾಗೂ ವಿದುಷಿ ಜೆ ಬಿ ಕೀರ್ತನಾ ಶ್ರೀರಾಮ್ ಅವರಲ್ಲಿ ಸಂಗೀತ ಅಭ್ಯಾಸವನ್ನು ಮಾಡುತ್ತಿದ್ದಾರೆ. ಪ್ರಾರ್ಥನಾ ಪುತ್ತೂರಿನ ದಂತ ವೈದ್ಯರಾದ ಡಾ. ಶ್ರೀಪ್ರಕಾಶ್ ಬಿ. ಪುತ್ರಿ.

ಕಾಲೇಜಿನ ಪ್ರಾಂಶುಪಾಲ ಅಶೋಕ್ ರಾಯನ್ ಕ್ರಾಸ್ತಾ  ಅವರನ್ನು ಅಭಿನಂದಿಸಿದ್ದಾರೆ.





































 
 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top