ಆಲಂಕಾರು: ನೂತನ ‘ದೈವಾನುಗ್ರಹ ಮೆಡಿಕಲ್’ ಇಂದು ಆಲಂಕಾರಿನಲ್ಲಿ ಶುಭಾರಂಭಗೊಂಡಿತು.
ಮಾಜಿ ಸಚಿವ ಎಸ್.ಅಂಗಾರ ಹಾಗೂ ಮಾಜಿ ಶಾಸಕ ಸಂಜೀವ ಮಠಂದೂರು ರಿಬ್ಬನ್ ಕಟ್ ಮಾಡುವ ಮೂಲಕ ಉದ್ಘಾಟಿಸಿದರು. ಭಾಸ್ಕರ ಗೌಡ ದೇವಸ್ಯ ದೀಪ ಬೆಳಗಿಸಿದರು.
ಈ ಸಂದರ್ಭದಲ್ಲಿ ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಚಿದಾನಂದ ಬೈಲಾಡಿ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸುಶಿಲಾ, ಪ್ರವೀಣ್ ಕುಂಟ್ಯಾನ, ಜಿನ್ನಪ್ಪ ಮಳುವೇಲು, ಪಂಚಾಯಿತಿ ಉಪಾಧ್ಯಕ್ಷ ರವಿ, ಆಶಾ ತಿಮ್ಮಪ್ಪ, ದಾಮೋದರ ಗೌಡ ಕಕ್ವೆ, ಸುಚಿತಾ ಬರೆಂಬೆಟ್ಟು, ಪ್ರದೀಪ್ ರೈ ಮನವಳಿಕೆ, ಪೂವಪ್ಪ ನಾಯ್ಕ, ಸಿಎ ಬ್ಯಾಂಕ್ ನ ಮನೋಹರ ಪ್ರಕಾಶ್, ಮಾಲಕರ ತಾಯಿ ಯಶೋಧ, ತಂಗಮ್ಮ, ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುಧಾಕರ್, ಅಲಂಕಾರು ಶಾಖಾ ಮ್ಯಾನೇಜರ್ ಪ್ರೀತಂ, ಉಪ್ಪಿನಂಗಡಿ ಶಾಖಾ ಮ್ಯಾನೇಜರ್ ರೇವತಿ, ಮಾಜಿ ತಾಲೂಕು ಪಂಚಾಯಿತಿ ಸದಸ್ಯ ಗಣೇಶ್ ಕೈಕುರೆ, ನಿವೃತ್ತ ಟಿಸಿ ದೇವಪ್ಪ ಗೌಡ, ಜಯಂತ ಪೂಜಾರಿ, ಗಣೇಶ್ ಬೊಟ್ಟಿಮಜಲು, ಜಯರಾಜ್, ಜನಾರ್ದನ ಪಠೇರಿ, ವಿಠಲ ರೈ, ನವೀನ್, ಹೇಮಚಂದ್ರ ಕಟ್ಟಪುಣಿ ಉಪಸ್ಥಿತರಿದ್ದರು. ಉಪಸ್ಥಿತರಿದ್ದರು.
ಮಾಲಕರಾದ ತೇಜಸ್ವಿನಿ ಶೇಖರ್ ಸ್ವಾಗತಿಸಿದರು. ಜಿತೇಶ್ ವಂದಿಸಿದರು. ನಾಲ್ಕು ಶಾಖೆಯ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.