ಬೆಳ್ಳಾರೆ: ವಿಶ್ವ ವಿಖ್ಯಾತ ಮೈಸೂರು ದಸರಾ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಬೆಳ್ಳಾರೆ ಜೀವನ್ ಸಾರಥ್ಯದ ಡ್ಯಾನ್ಸ್ & ಬೀಟ್ಸ್ ತಂಡ ಆಯ್ಕೆಯಾಗಿದೆ.
ಡ್ಯಾನ್ಸ್ & ಬೀಟ್ಸ್ ಬೆಳ್ಳಾರೆ, ಪಂಜ, ಕೈಕಂಬ, ಸುಬ್ರಹ್ಮಣ್ಯ ವಿದ್ಯಾರ್ಥಿಗಳ ತಂಡವನ್ನೊಳಗೊಂಡಿದೆ.
ಅ.11 ರಂದು ದಸರಾ ಮೈಸೂರು ಜಗನ್ ಮೋಹನ ಅರಮನೆಯ ಸಾಂಸ್ಕೃತಿಕ ವೇದಿಕೆಯಲ್ಲಿ ನೃತ್ಯ ಸಂಭ್ರಮದ ಕಾರ್ಯಕ್ರಮದಲ್ಲಿ ತಮ್ಮ ಡ್ಯಾನ್ಸ್ ಪ್ರದರ್ಶನ ನೀಡಲಿದ್ದಾರೆ.
























