ರಾಷ್ಟ್ರಮಟ್ಟದ ಈಜು ಸ್ಪರ್ಧೆ : ಅಂಬಿಕಾ ಸಿಬಿಎಸ್‌ ಇ ವಿದ್ಯಾರ್ಥಿಗಳಿಂದ ಅಮೋಘ ಸಾಧನೆ | ಎಸ್. ಜಿ. ಎಫ್. ಐ ಗೆ ಆಯ್ಕೆ

ಪುತ್ತೂರು: ಬಪ್ಪಳಿಗೆಯ ಅಂಬಿಕಾ ವಿದ್ಯಾಲಯ ಸಿಬಿಎಸ್‌ ಇಯ ವಿದ್ಯಾರ್ಥಿಗಳು ಮಧ್ಯಪ್ರದೇಶದ ಮಂಡ್ಸೂರ್ ಸರಸ್ವತಿ ಸೈನಿಕ ಶಾಲೆಯಲ್ಲಿ ನಡೆದ ವಿದ್ಯಾಭಾರತಿ ರಾಷ್ಟ್ರೀಯ ಮಟ್ಟದ ಈಜು ಸ್ಪರ್ಧೆಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿ  ಮುಂದಿನ ಹಂತ ಎಸ್. ಜಿ. ಎಫ್. ಐ (ಸ್ಕೂಲ್ ಗೇಮ್ ಫೆಡರೇಶನ್ ಆಫ್ ಇಂಡಿಯಾ ) ಗೆ ಆಯ್ಕೆಗೊಂಡಿದ್ದಾರೆ.

10ನೇ ತರಗತಿ ವರ್ಧಿನ್ ದೀಪಕ್ ರೈ 50 ಮೀ. ಬಟರ್ ಪ್ಲೈಯ ಲ್ಲಿ ಚಿನ್ನ, 50 ಮೀ.  ಬ್ರೆಸ್ಟ್ ಸ್ಟ್ರೋಕ್‌ ನಲ್ಲಿ ಬೆಳ್ಳಿ ಹಾಗೂ 100 ಮೀ. ಬ್ರೆಸ್ಟ್ ಸ್ಟ್ರೋಕ್‌ನಲ್ಲಿ ಬೆಳ್ಳಿ ಪದಕ ಗಳಿಸಿದ್ದಾರೆ. 6ನೇ ತರಗತಿ ಪ್ರತ್ಯುಷ್ ಎಲ್.ಎಸ್. ಗೌಡ 50 ಮೀ. ಬ್ಯಾಕ್‌ಸ್ಟ್ರೋಕ್ ನಲ್ಲಿ ಚಿನ್ನ, 50 ಮೀ. ಬಟರ್ ಫ್ಲೈ ನಲ್ಲಿ ಕಂಚು ಮತ್ತು 4*100 ಮೀ. ಮೆಡ್ಲೇ ರಿಲೇಯಲ್ಲಿ ಚಿನ್ನ ಪಡೆದಿದ್ದಾರೆ. 8ನೇ ತರಗತಿಯ ಮೆಹೆಕ್ ರವಿಕುಮಾರ್ ಕೊಠಾರಿ 100 ಮೀ. ಬ್ಯಾಕ್‌ಸ್ಟ್ರೋಕ್ ನಲ್ಲಿ  ಚಿನ್ನ ಗೆದ್ದು ಸಂಭ್ರಮಿಸಿದ್ದಾರೆ.

ಈ ಎಲ್ಲಾ ವಿದ್ಯಾರ್ಥಿಗಳು ನವೆಂಬರ್ ತಿಂಗಳಲ್ಲಿ ಗುಜರಾತ್‌ನ ರಾಜಕೋಟ್‌ನಲ್ಲಿ ನಡೆಯುವ ಮುಂದಿನ ಹಂತದ ಎಸ್.ಜಿ.ಎಫ್.ಐ (ಸ್ಕೂಲ್ ಗೇಮ್ ಫೆಡರೇಶನ್ ಆಫ್ ಇಂಡಿಯಾ) ಮೀಟ್‌ನಲ್ಲಿ ಭಾಗವಾಹಿಸಲಿದ್ದಾರೆ ಎಂದು ಶಾಲಾ ಪ್ರಕಟನೆ ತಿಳಿಸಿದೆ. ವಿದ್ಯಾರ್ಥಿಗಳು ಪುತ್ತೂರು ಬಾಲವನದ ಈಜು ತರಬೇತುದಾರರಾದ ಪಾರ್ಥ ವಾರಣಾಸಿ ಹಾಗೂ ದೀಕ್ಷಿತ್  ರಾವ್ ಇವರಿಂದ ಈಜು ತರಬೇತಿ ಪಡೆದು ಕೊಂಡಿದ್ದಾರೆ.

































 
 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top