ಹಿಜ್ಬುಲ್ಲ ಮುಖ್ಯಸ್ಥ ಹಸನ್ ನಸ್ರಲ್ಲಾ ಗುರಿ ಮಾಡಿಕೊಂಡು ದಾಳಿ
ಜೆರುಸಲೆಂ: ಇಸ್ರೇಲ್ ಮತ್ತು ಹಿಜ್ಬುಲ್ಲ ನಡುವಿನ ಸಮರ ತೀವ್ರಗೊಂಡಿದ್ದು, ಶುಕ್ರವಾರ ಸಂಜೆ ಇಸ್ರೇಲ್ ವಾಯುಪಡೆ ಲೆಬನಾನ್‌ನ ರಾಜಧಾನಿ ಬೈರುತ್‌ನಲ್ಲಿ ಭಾರಿ ದಾಳಿ ನಡೆಸಿ ಹಿಜ್ಬುಲ್ಲದ ಕೇಂದ್ರ ಕಚೇರಿಯನ್ನು ಧ್ವಂಸಗೊಳಿಸಿದೆ.
ದಾಳಿಯ ಗುರಿ ಹಿಜ್ಬುಲ್ಲ ಮುಖ್ಯಸ್ಥ ಹಸನ್ ನಸ್ರಲ್ಲಾ ಆಗಿದ್ದ. ಆದರೆ ಈತ ತಪ್ಪಿಸಿಕೊಂಡಿದ್ದಾನೆ. ಆದರೆ ಹಿಜ್ಬುಲ್ಲದ ಇಬ್ಬರು ಉನ್ನತ ಕಮಾಂಡರ್‌ಗಳು ಬಲಿಯಾಗಿದ್ದಾರೆ ಎಂದು ವರದಿಗಳು ತಿಳಿಸಿವೆ. ದಾಳಿಗೆ 8 ಬಲಿಯಾಗಿ 76 ಮಂದಿಗೆ ಗಾಯಗೊಂಡಿದ್ದಾರೆ.
ನೆತನ್ಯಾಹು ವಿಶ್ವಸಂಸ್ಥೆಯಲ್ಲಿ ಹಿಜ್ಬುಲ್ಲಾ ಉಗ್ರರ ವಿರುದ್ಧ ಗುಡುಗಿದ ಬೆನ್ನಲ್ಲೇ ಈ ದಾಳಿ ನಡೆದಿದೆ. ಅವರು ಅಂತಹ ದಾಳಿಯಿಂದ ಬದುಕುಳಿದಿದ್ದಾರೆಂದು
ಇಸ್ರೇಲ್ ದಾಳಿಯಲ್ಲಿ ಆರು ಕಟ್ಟಡಗಳು ಧ್ವಂಸಗೊಂಡಿವೆ ಎಂದು ಹಿಜ್ಬುಲ್ಲಗೆ ನಿಕಟವಾದ ಮೂಲವೊಂದು ತಿಳಿಸಿದೆ. ಹಿಜ್ಬುಲ್ಲಾ ಮತ್ತು ಇಸ್ರೇಲ್ ನಡುವಿನ ಸುಮಾರು ಒಂದು ವರ್ಷದ ಸಂಘರ್ಷದಲ್ಲಿ ಬೈರುತ್‌ನಲ್ಲಿ ನಡೆದ ಅತಿದೊಡ್ಡ ದಾಳಿ ಇದಾಗಿದೆ.
ದಾಳಿಯಲ್ಲಿ ಹಿಜ್ಬುಲ್ಲದ ಕ್ಷಿಪಣಿ ಘಟಕದ ಕಮಾಂಡರ್ ಮೊಹಮ್ಮದ್ ಅಲಿ ಇಸ್ಮಾಯಿಲ್ ಮತ್ತು ಉಪ ಕಮಾಂಡರ್ ಹುಸೇನ್ ಅಹ್ಮದ್ ಇಸ್ಮಾಯಿಲ್ ಸಾವಿಗೀಡಾಗಿದ್ದಾರೆಂದು ತಿಳಿದುಬಂದಿದೆ. ಅಲಿ ಇಸ್ಮಾಯಿಲ್ ಇಸ್ರೇಲ್ ವಿರುದ್ಧ ಹಲವಾರು ಭಯೋತ್ಪಾದಕ ದಾಳಿಗಳ ಸೂತ್ರಧಾರನಾಗಿದ್ದ. ಬುಧವಾರ ನಡೆದ ಕ್ಷಿಪಣಿ ದಾಳಿ ಸೇರಿದಂತೆ ಇಸ್ರೇಲ್ ಮೇಲೆ ನಡೆದ ಹಲವು ರಾಕೆಟ್ ದಾಳಿಯಲ್ಲಿ ಪ್ರಮುಖ ಪಾತ್ರಧಾರಿಯಾಗಿದ್ದ. ಹೀಗಾಗಿ ಹಿಬ್ಜುಲ್ಲದ ಕ್ಷಿಪಣಿಗಳು ಮತ್ತು ರಾಕೆಟ್ಸ್ ಫೋರ್ಸ್ ಮುಖ್ಯಸ್ಥ ಮತ್ತು ಈ ಘಟಕದ ಇತರ ಹಿರಿಯ ಕಮಾಂಡರ್‌ಗಳನ್ನು ಹತ್ಯೆ ಮಾಡಲಾಗಿದೆ ಎಂದು ಇಸ್ರೇಲ್ ಹೇಳಿದೆ.
ಇಸ್ರೇಲ್-ಹಮಾಸ್ ಯುದ್ಧಕ್ಕೆ ಹಿಜ್ಬುಲ್ಲಾ ಉಗ್ರರು ಪ್ರವೇಶಿಸಿ ಕಾವು ಹೆಚ್ಚಿಸಿರುವ ಹೊತ್ತಿನಲ್ಲೇ ಯೆಮೆನ್‌ನ ಹೌತಿ ಉಗ್ರರು ಕೂಡ ಕದನ ಪ್ರವೇಶ ಮಾಡಿದ್ದಾರೆ. ಇಸ್ರೇಲ್ ದಾಳಿಗೆ ಗುರುವಾರ ಹಿಜ್ಬುಲ್ಲ ಉಗ್ರರ ಮೊಹಮ್ಮದ್ ಸ್ರುರ್ ಹತವಾಗಿದ್ದ. ಇದಕ್ಕೆ ಪ್ರತಿಯಾಗಿ ಹೌತಿ ಉಗ್ರರು ಗುರುವಾರ ರಾತ್ರಿ ಇಸ್ರೇಲ್ ಮೇಲೆ ಕ್ಷಿಪಣಿ ದಾಳಿ ನಡೆಸಿದ್ದಾರೆ. ಆದರೆ ಈ ಕ್ಷಿಪಣಿಯನ್ನು ಗಡಿಯಿಂದ ಹೊರಗೆ ನಮ್ಮ ವಾಯು ರಕ್ಷಣಾ ವ್ಯವಸ್ಥೆ ಹೊಡೆದುರುಳಿಸಿದೆ ಎಂದು ಇಸ್ರೇಲ್ ಹೇಳಿದೆ. ಹೌತಿ ಉಗ್ರರನ್ನು ಸ್ರುರ್ ಬೆಂಬಲಿಸುತ್ತಿದ್ದ. ಆತನನ್ನು ಇಸ್ರೇಲ್ ಹತ್ಯೆ ಮಾಡಿರುವ ಕಾರಣ ಹೌತಿ ಉಗ್ರರು ಕೂಡ ಸಿಟ್ಟಿಗೆದ್ದಿದ್ದಾರೆ.