ಪುತ್ತೂರು: ಓಮ್ನಿ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಚರಂಡಿಗೆ ಉರುಳಿ ಬಿದ್ದ ಘಟನೆ ತಿಂಗಳಾಡಿ ಬಡಕೋಡಿ ರಸ್ತೆಯ ನೆಕ್ಕಿಲು ಎಂಬಲ್ಲಿ ಇಂದು ಬೆಳಿಗ್ಗೆ ನಡೆದಿದೆ.
ಓಮ್ನಿಯಲ್ಲಿ ಚಾಲಕ ಮಾತ್ರವಿದ್ದು ಯಾವುದೇ ಅಪಾಯಗಳಿಲ್ಲದೇ ಪಾರಾಗಿದ್ದಾರೆ.
ಓಮ್ನಿಯು ತಿಂಗಳಾಡಿಯಿಂದ ರೆಂಜಲಾಡಿಗೆ ತೆರಳುತ್ತಿತ್ತು.ಅಪಘಾತವು ಬೆಳಗಿನ ಜಾವ 7.30ರ ಸುಮಾರಿಗೆ ನಡೆದಿದೆ. ರೆಂಜಿಲಾಡಿಗೆ ನಿವಾಸಿ ರಫೀಕ್ ಎಂಬವರು ಅಪಘಾತಕ್ಕಿಡಾದ ವಾಹನ ಚಲಾಯಿಸುತ್ತಿದ್ದರು. ನಿದ್ದೆ ಮಂಪರು ಆವರಿಸಿದ್ದರಿಂದ ವಾಹನ ಹತೋಟಿ ಕಳೆದುಕೊಂಡು ರಸ್ತೆಯಿಂದ 1 ಮೀಟರ್ ದೂರದಲ್ಲಿದ ಚರಂಡಿಗೆ ಉರುಳಿದೆ. ವಾಹನ ಉರುಳಿಬಿದ್ದ ಸಮೀಪದಲ್ಲಿ ವಿದ್ಯುತ್ ಕಂಬವಿತ್ತು. ಅದಕ್ಕೆ ಢಿಕ್ಕಿ ಹೊಡೆಯುತ್ತಿದ್ದರೇ ಭಾರಿ ಅನಾಹುತ ಸಂಭವಿಸುವ ಸಾಧ್ಯತೆಯಿದ್ದು
ಸ್ಥಳೀಯರ ನೆರವಿನಿಂದ ಕ್ರೇನ್ ಸಹಾಯದಿಂದ ಓಮ್ನಿಯನ್ನು ಮೇಲಕ್ಕೆತ್ತಲಾಯಿತು. ವಾಹನ ಸಂಪೂರ್ಣ ಜಖಂಗೊಂಡಿದೆ ಎಂದು ತಿಳಿದು ಬಂದಿದೆ.