ಪುತ್ತೂರು : ಮನೆಯಲ್ಲಿ ಒಂಟಿ ಜೀವನ ನಡೆಸುತ್ತಿದ್ದ ಮಚ್ಚಿಮಲೆ ನಿವಾಸಿ ಅಕ್ಕಮ್ಮ ಅವರಿಗೆ ಮಾಶಾಸನದ ಪ್ರಥಮ ಕಂತನ್ನು ವಿತರಿಸಲಾಯಿತು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಮಂಜೂರಾದ ಮಾಸಾಶನ ಪ್ರಥಮ ಕಂತು ರೂ. 750ನ್ನು ಒಕ್ಕೂಟ ಅಧ್ಯಕ್ಷ ಮಹಾಲಿಂಗ ನಾಯ್ಕ ವಿತರಿಸಿದರು.
ಈ ಸಂದರ್ಭದಲ್ಲಿ ಯೋಜನೆಯ ಮೇಲ್ವಿಚಾರಕ ಹರೀಶ್ ಕುಲಾಲ್, ಸೇವಾಪ್ರತಿನಿಧಿ ಆಶಾಲತಾ, ದೀಪಿಕಾ, ಸುವಿಧಾ ಸಹಾಯಕಿ ಸ್ವಾತಿ, ನವದುರ್ಗ ಸಂಘದ ಸದಸ್ಯ ಹೊನ್ನಪ್ಪ ಪೂಜಾರಿ ಉಪಸ್ಥಿತರಿದ್ದರು