ಪ್ಯಾಲೆಸ್ತೀನ್‌ ಧ್ವಜ ಹಿಡಿದು ಬೈಕ್‌ನಲ್ಲಿ ಓಡಾಟ : ನಾಲ್ವರು ವಶ

ಚಿಕ್ಕಮಗಳೂರಿನಲ್ಲೂ ನಡೆಯಿತು ನಿಯಮ ಉಲ್ಲಂಘನೆ

ಚಿಕ್ಕಮಗಳೂರು: ಕೊಪ್ಪಲ;ದಲ್ಲಿ ಈದ್‌ ಮಿಲಾದ್‌ ಹಬ್ಬಕ್ಕೆ ಶುಭಕೋರುವ ಬ್ಯಾನರ್‌ನಲ್ಲಿ ಪ್ಯಾಲೆಸ್ತೀನ್‌ ಪರ ಘೋಷಣೆ ಬರೆದ ಬೆನ್ನಿಗೆ ಚಿಕ್ಕಮಗಳೂರು ನಗರದ ಪ್ರಮುಖ ರಸ್ತೆಗಳಲ್ಲಿ ಯುವಕರ ತಂಡವೊಂದು ಪ್ಯಾಲೆಸ್ಟೈನ್ ಧ್ವಜವನ್ನು ಹಿಡಿದು ಬೈಕ್​ನಲ್ಲಿ ರೌಂಡ್ಸ್ ಹಾಕಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ಘಟನೆ ಸಂಬಂಧ ಚಿಕ್ಕಮಗಳೂರು ನಗರ ಠಾಣೆಯ ಪೊಲೀಸರು ನಾಲ್ವರು ಅಪ್ರಾಪ್ತ ವಯಸ್ಸಿನ ಯುವಕರನ್ನು ವಶಕ್ಕೆ ಪಡೆದು ಅಪ್ರಾಪ್ತ ವಿಚಾರಣೆ ನಡೆಸುತ್ತಿದ್ದಾರೆ.
ಅಪ್ರಾಪ್ತರಿಗೆ ಪ್ಯಾಲೆಸ್ತೀನ್ ಧ್ವಜ ಸಿಕ್ಕಿದ್ದು ಹೇಗೆ? ಧ್ವಜ‌ ನೀಡಿ ನಗರದಾದ್ಯಂತ ಓಡಾಟ ನಡೆಸಲು ಸೂಚನೆ ನೀಡಲಾಗಿತ್ತಾ? ಇಂದು ಈದ್ ಮಿಲಾದ್ ಮೆರವಣಿಗೆಯಲ್ಲಿ ಪ್ಯಾಲೆಸ್ತೀನ್ ಧ್ವಜ ಪ್ರದರ್ಶನಕ್ಕೆ ಪ್ಲಾನ್ ಮಾಡಲಾಗಿತ್ತಾ? ಎಂಬ ಅಂಶಗಳ ಮೇಲೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಇನ್‌ಸ್ಪೆಕ್ಟರ್ ಗವಿರಾಜ್ ನೇತೃತ್ವದಲ್ಲಿ ತಂಡ ತನಿಖೆ ನಡೆಸುತ್ತಿದೆ. ಪ್ಯಾಲೆಸ್ತೀನ್ ಧ್ವಜ ಪ್ರಕರಣವನ್ನ ಪೊಲೀಸ್ ಇಲಾಖೆ ಗಂಭೀರವಾಗಿ ಪರಿಗಣಿಸಿದೆ. ಈ ಘಟನೆ ಸಂಬಂಧ ಚಿಕ್ಕಮಗಳೂರು ನಗರ ಪೊಲೀಸ್ ಠಾಣೆಯಲ್ಲಿ 198ಅಡಿ ಪ್ರಕರಣ ದಾಖಲಾಗಿದೆ.
ಕೋಮು ಸೂಕ್ಷ್ಮ ಚಿಕ್ಕಮಗಳೂರು ನಗರದಲ್ಲಿ ಗಲಭೆಗೆ ಸಂಚು ಎಂದು ಹಿಂದೂ ಸಂಘಟನೆಗಳು ಆಕ್ರೋಶ ಹೊರ ಹಾಕಿವೆ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top