ಕೊಪ್ಪಳ : ಈದ್ ಮಿಲಾದ್ ಹಬ್ಬವನ್ನು ಶಾಂತಿಯುತವಾಗಿ ಆಚರಿಸಲು ಪೊಲೀಸರು ಹಲವು ನಿಯಮಾವಳಿಗಳನ್ನು ರಚಿಸಿದ್ದಾರೆ. ಇದರಲ್ಲಿ ಬೇರೆ ದೇಶದ ಕುರಿತಾದ ಬ್ಯಾನರ್, ಚಿತ್ರಗಳ ಪ್ರದರ್ಶನ ಮಾಡಬಾರದು, ಘೋಷಣೆಗಳನ್ನು ಕೂಗಬಾರದು ಎಂಬ ನಿಯಮವೂ ಇದೆ. ಆದರೆ ಕೊಪ್ಪಳದಲ್ಲಿ ಈದ್ ಮಿಲಾದ್ ಬ್ಯಾನರ್ನಲ್ಲಿ ಫ್ರೀ ಪ್ಯಾಲೆಸ್ತೀನ್ ಬರಹ ಹಾಕಿ ಮತ್ತೆ ಉದ್ಧತಟತನ ಮೆರೆದಿದ್ದಾರೆ. ಹಿಂದೂ ಸಂಘಟನೆಗಳ ವಿರೋಧದ ಬಳಿಕ ಫ್ರೀ ಪ್ಯಾಲೆಸ್ತೀನ್ ಬರಹಕ್ಕೆ ತೇಪೆ ಹಾಕಿ ಮರೆಮಾಚಲಾಗಿದೆ. ಬ್ಯಾನರ್ನ ಒಂದು ಭಾಗದಲ್ಲಿ ‘ಫ್ರೀ ಪ್ಯಾಲೆಸ್ತೀನ್’ ಬರಹ ಹಾಕಲಾಗಿತ್ತು. ಇದಕ್ಕೆ ಹಿಂದೂ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದು ಪೊಲೀಸರಿಗೆ ಮಾಹಿತಿ ನೀಡಿದ್ದರು. ಕೂಡಲೇ ಎಚ್ಚೆತ್ತ ಪೊಲೀಸರು ಫ್ರೀ ಪ್ಯಾಲೆಸ್ತೀನ್ ಎಂಬ ಬರಹಕ್ಕೆ ತೇಪೆ ಹಾಕಿದ್ದಾರೆ.
ಈದ್ ಮಿಲಾದ್ ಹಬ್ಬ ಆಚರಣೆ ಹಿನ್ನೆಲೆ ಕೊಪ್ಪಳ ಜಿಲ್ಲೆ ಗಂಗಾವತಿಯ ಕಿಲ್ಲಾ ಏರಿಯಾದಲ್ಲಿ ಬ್ಯಾನರ್ ಅಳವಡಿಸಲಾಗಿದೆ. ಇದಕ್ಕೆ ಹಿಂದೂ ಸಂಘಟನೆಗಳ ವಿರೋಧ ಹೆಚ್ಚಾಗುತ್ತಿದ್ದಂತೆ ಸಂಘಟಕರು ಬ್ಯಾನರ್ ಬದಲಾವಣೆ ಮಾಡಿ ಈದ್ ಮಿಲಾದ್ ಹಬ್ಬದ ಹೊಸ ಬ್ಯಾನರ್ ಅಳವಡಿಕೆ ಮಾಡಿದ್ದಾರೆ.