ಪುತ್ತೂರು: ಶಾರ್ಟ್ ಸರ್ಕ್ಯೂಟ್ ನಿಂದ ಖಾಸಗೀ ಆಸ್ಪತ್ರೆಯೊಂದರಲ್ಲಿ ಬೆಂಕಿ ಕಾಣಿಸಿಕೊಂಡು, ಅಗ್ನಿಶಾಮಕ ದಳದವರು ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬೊಳುವಾರಿನಲ್ಲಿರುವ ಖಾಸಗಿ ಆಸ್ಪತ್ರೆಯಲ್ಲಿ ಬುಧವಾರ ಬೆಳಗ್ಗಿನ ಜಾವ ಬೆಂಕಿ ಕಾಣಿಸಿಕೊಂಡಿದೆ. ವಿದ್ಯುತ್ ಮೀಟರ್ ಬೋರ್ಡ್ನ ಲ್ಲಿ ಶಾರ್ಟ್ ಸರ್ಕ್ಯೂಟ್ ಆದ ಪರಿಣಾಮ ಜಂಕ್ಷನ್ ಬಾಕ್ಸ್ ಸಂಪೂರ್ಣ ಸುಟ್ಟು ಕರಕಲಾಗಿದೆ. ಆಸ್ಪತ್ರೆಯ ತುಂಬಾ ಹೊಗೆ ತುಂಬಿಕೊಂಡಿದ್ದು, ತಕ್ಷಣ ಆಗ್ನಿಶಾಮಕ ದಳದವರು ಆಗಮಿಸಿ ಮುನ್ನೆಚ್ಚರಿಕೆಯನ್ನು ತೆಗೆದುಕೊಂಡಿದ್ದು, ರೋಗಿಗಳಿಗೆ ಯಾವುದೇ ಸಮಸ್ಯೆಯಾಗಿಲ್ಲ ಎಂದು ಹೇಳಲಾಗಿದೆ.
ಕಾರ್ಯಚರಣೆಯಲ್ಲಿ ಅಗ್ನಿಶಾಮಕ ಠಾಣಾಧಿಕಾರಿ ಶಂಕರ ಸಹಾಯಕ, ಪ್ರಮುಖ ಅಗ್ನಿಶಾಮಕ ಎಂ. ಪಿ. ಲೀಲಾಧರ, ಅಗ್ನಿಶಾಮಕ ಚಾಲಕ ಮೋಹನ ಜಾಧವ, ಅಗ್ನಿಶಾಮಕರಾದ ಪಾಂಡುರಂಗ ವಾಲಿಕಾರ, ಜಾಫರ್ ಅಹ್ಮದ್ ನಧಾಫ್, ಸಿದ್ದಾರೂಢ ದೊಡ್ಡಲಿಂಗಣ್ಣವರ ಭಾಗವಹಿಸಿದ್ದಾರೆ.