ಸವಣೂರು : ಸವಣೂರು ಉ ಹಿ ಪ್ರಾ ಶಾಲೆಯ ಆರನೇ ಮತ್ತು ಎ೦ಟನೇ ತರಗತಿಯ ವಿದ್ಯಾರ್ಥಿಗಳು ,ಸಾಮಾಜಿಕ ಅಧ್ಯಯನ ಪಾಠ, ಸ್ಥಳೀಯ ಸರಕಾರದ ಮಾಹಿತಿ. ಎಂಬುದರ ಬಗ್ಗೆ ಪ್ರಶ್ನಾವಳಿಯ ಕುರಿತ ಉತ್ತರ ಪಡೆಯಲು ಸವಣೂರು ಗ್ರಾಮ ಪಂಚಾಯಿತಿಗೆ ಸೋಮವಾರ ಭೇಟಿ ನೀಡಿದರು.
ವಿದ್ಯಾರ್ಥಿಗಳು ಗ್ರಾಪಂ ಅಧ್ಯಕ್ಷೆ ರಾಜೀವಿ ಶೆಟ್ಟಿ ಹಾಗೂ ಪಂಚಾಯತ್ ಅಭಿವೃದ್ಧಿ ಅಧಿಕಾರಿಯಿಂದ ಉತ್ತರ ಪಡೆದುಕೊಂಡರು.. ಗ್ರಾಮ ಸಭೆ, ವಾರ್ಡ್ ಸಭೆ,ಅಧ್ಯಕ್ಷರ ಅಧಿಕಾರಗಳು, ಬೇಡಿಕೆಗಳು ಮತ್ತು ಅನುದಾನ ಮತ್ತು ವ್ಯಾಪ್ತಿಯ ಬಗ್ಗೆ ತಿಳಿಕೊಳ್ಳಲಾಯಿತು.
ಸಭೆಯಲ್ಲಿ ಗ್ರಾಪಂ ಸದಸ್ಯರಾದ ಚಂದ್ರಾವತಿ ಸುಣ್ಣಾಜೆ, ಬಾಬು, ಇಂದಿರಾ, ತೀರ್ಥರಾಮ ಕೆಡೆಂಜಿ, ಶಾಲಾ ಮುಖ್ಯ ಶಿಕ್ಷಕ ಬಾಲಕೃಷ್ಣ ಕೆ., ಸಹಶಿಕ್ಷಕಿ ಆಶಾ ಎಂ. ಉಪಸ್ಥಿತರಿದ್ದು.