ನಿರ್ದೇಶಕ ಯೋಗರಾಜ್‌ ಭಟ್‌ ವಿರುದ್ಧ ಕೇಸ್‌

ಬೆಂಗಳೂರು: ‘ಮನದ ಕಡಲು’ ಸಿನಿಮಾ ಚಿತ್ರೀಕರಣದ ವೇಳೆ 30 ಅಡಿ ಎತ್ತರದ ಏಣಿಯಿಂದ ಬಿದ್ದು ಲೈಟ್‌ಬಾಯ್ ಮೃತಪಟ್ಟಿರುವ ಘಟನೆ ಬೆಂಗಳೂರಿನ ಮಾದನಾಯಕನ ಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸೆ.3ರಂದು ನಡೆದಿದ್ದು, ಈ ಸಂಬಂಧ ಚಿತ್ರದ ನಿರ್ದೇಶಕ ಯೋಗರಾಜ ಭಟ್ ವಿರುದ್ಧ ಎಫ್‌ಐಆರ್ ದಾಖಲಾಗಿದೆ.

ತುಮಕೂರು ಜಿಲ್ಲೆಯ ಕೊರಟಗೆರೆ ಮೂಲದ ಮೋಹನ್ ಕುಮಾರ್ (30) ಮೃತ ಲೈಟ್‌ಬಾಯ್. ಸೆ.3ರಂದು ಮಾದನಾಯಕನಹಳ್ಳಿ ಸಮೀಪದ ವಿಆರ್‌ಎಲ್ ಅರೇನಾ ಬಳಿ ಚಿತ್ರೀಕರಣ ನಡೆಯುತ್ತಿತ್ತು. ಆ ವೇಳೆ ಅವಘಡ ಸಂಭವಿಸಿದೆ.

ಮೃತ ಮೋಹನ್ ಹಾಗೂ ಅವರ ಸಹೋದರ ಬೆಂಗಳೂರು ನಗರದ ಬಡಾವಣೆಯೊಂದರಲ್ಲಿ ನೆಲೆಸಿದ್ದರು. ಚಿತ್ರರಂಗದಲ್ಲಿ ಇಬ್ಬರೂ ಲೈಟ್‌ಬಾಯ್‌ಗಳಾಗಿ ಕೆಲಸ ಮಾಡುತ್ತಿದ್ದರು. ಸೆ.3ರಂದು ಚಿತ್ರೀಕರಣದ ವೇಳೆ ಮೋಹನ್ 30 ಅಡಿ ಎತ್ತರದ ಏಣಿಯಿಂದ ಬಿದ್ದು ತೀವ್ರವಾಗಿ ಗಾಯಗೊಂಡಿದ್ದರು. ಅವನನ್ನು ಗೊರಗುಂಟೆ ಪಾಳ್ಯದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಿಸದೆ ಗುರುವಾರ ಮೃತಪಟ್ಟಿದ್ದಾರೆ.
ಚಿತ್ರೀಕರಣದ ವೇಳೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳದೇ ನಿರ್ಲಕ್ಷ್ಯ ವಹಿಸಿದ ಆರೋಪ ಅಡಿ ಚಿತ್ರ ನಿರ್ದೇಶಕ ಯೋಗರಾಜ್ ಭಟ್ ಹಾಗೂ ವ್ಯವಸ್ಥಾಪಕ ಸುರೇಶ್ ಸೇರಿ ಮೂವರ ವಿರುದ್ಧ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ



































 
 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top