ಲೈಂಗಿಕ ದೌರ್ಜನ್ಯ ಪ್ರಕರಣ | ಬೆಂಗಳೂರಿನ ಹೊಟೇಲ್‍ ನಲ್ಲಿ ಪೊಲೀಸರಿಂದ ಮಹಜರು

ಪುತ್ತೂರು : ಅರುಣ್ ಕುಮಾರ್ ಪುತ್ತಿಲರ ಮೇಲೆ ಲೈಂಗಿಕ ದೌರ್ಜನ್ಯ ಹಿನ್ನಲೆಯಲ್ಲಿ ಮಹಿಳೆಯೋರ್ವರು ಪುತ್ತೂರು ನಗರ ಠಾಣೆಗೆ ನೀಡಿದ ದೂರಿನ ಹಿನ್ನಲೆಯಲ್ಲಿ ಲೈಂಗಿಕ ದೌರ್ಜನ್ಯ ನಡೆಸಿದ ಬೆಂಗಳೂರಿನ ಹೊಟೇಲ್‍ ನಲ್ಲಿ ಮಹಜರು ನಡೆಸಲಾಗುತ್ತಿದೆ ಎಂದು ತಿಳಿದು ಬಂದಿದೆ.

ಈಗಾಗಲೇ ಪುತ್ತೂರಿನಲ್ಲಿ ಮಹಿಳೆಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಪುತ್ತೂರು ನಗರ. ಪೊಲೀಸ್ ಠಾಣೆ ಇನ್ಸ್ ಪೆಕ್ಷರ್ ಸತೀಶ್ ಜಿ.ಜಿ ಅವರ ನೇತೃತ್ವದಲ್ಲಿ ಬೆಂಗಳೂರಿನ ಪೈ ವಿಸ್ಟಾ ಹೊಟೇಲ್ & ಪಾರ್ಟಿ ಹಾಲ್ ಹೊಟೇಲ್‌ನಲ್ಲಿ ಮಹಜರು ನಡೆಸಲಾಗುತ್ತಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.

ಪ್ರಕರಣ ದಾಖಲಾದ ಬಳಿಕ ಪುತ್ತಿಲರಿಗೆ ಜಾಮೀನು ಲಭಿಸಿದ್ದು, ಇದೊಂದು ಸುಳ್ಳು ಆರೋಪ ಎಂದು ಪತ್ರಿಕೆಯವರಿಗೆ ತಿಳಿಸಿದ್ದಾರೆ.







































 
 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top