ಪುತ್ತೂರು: ಬನ್ನೂರಿನ ಕರ್ಮಲದ ಮನೆಯೊಂದಕ್ಕೆ ಪುತ್ತೂರು ನಗರ ಠಾಣಾ ಪೊಲೀಸರು ದಾಳಿ ನಡೆಸಿ ಇಬ್ಬರು ಮಹಿಳೆಯರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಬಂಧಿತರಲ್ಲಿ ಹೊರ ಊರಿನ ಓರ್ವ ಮುಸ್ಲಿಂ ಮಹಿಳೆ ಹಾಗೂ ಓರ್ವ ಕ್ರಿಶ್ಚಿಯನ್ ಮಹಿಳೆಯಾಗಿದ್ದು, ಬಾಡಿಗೆ ಮನೆಯೊಂದರಲ್ಲಿ ವಾಸವಾಗಿದ್ದರು ಎಂದು ತಿಳಿದುಬಂದಿದೆ. ಹಲವು ಸಂಶಯದ ಮೇಲೆ ದಾಳಿ ನಡೆಸಲಾಗಿತ್ತು. ಆದರೆ ದಾಳಿ ವೇಳೆ ಅನುಮಾನಾಸ್ಪದ ಇಬ್ಬರು ಮಹಿಳೆಯರನ್ನು ಹೊರತುಪಡಿಸಿ ಬೇರೆನು ಪತ್ತೆಯಾಗಿಲ್ಲ ಎನ್ನಲಾಗಿದೆ.
ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದುಬರಬೇಕಿದೆ.