ಬೆಳ್ತಂಗಡಿ: ಬೆಳಾಲು ನಿವೃತ್ತ ಮುಖ್ಯ ಶಿಕ್ಷಕ ಬಾಲಕೃಷ್ಣ ಬಡೆಕ್ಕಿಲ್ಲಾಯ (83) ಬರ್ಬರವಾಗಿ ಕೊಲೆ ಮಾಡಿರುವ ಆರೋಪದಲ್ಲಿ ಆ.24ರಂದು ಧರ್ಮಸ್ಥಳ ಠಾಣಾ ಪೊಲೀಸರಿಂದ ಬಂಧಿತರಾಗಿ ನ್ಯಾಯಾಂಗ ಬಂಧನದಲ್ಲಿದ್ದ ಕಾಸರಗೋಡು ಮುಳ್ಳೇರಿಯಾದ ರಾಘವೇಂದ್ರ ಕೆದಿಲಾಯ (54ವ) ಮತ್ತು ಆತನ ಮಗ ಮುರಳಿ ಕೃಷ್ಣ (21ವ)ರವರನ್ನು ಇಂದು ಸರ್ಕಲ್ ಇನ್ಸೆಕ್ಟರ್ ನಾಗೇಶ್ ಕದ್ರಿ ನೇತೃತ್ವದಲ್ಲಿ ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ
ಕೊಲೆಗೀಡಾದ ಬಾಲಕೃಷ್ಣ ಬಡೆಕ್ಕಿಲಾಯರ ಮಗಳು ವಿಜುಲಕ್ಷ್ಮಿ ಅವರ ಪತಿ ರಾಘವೇಂದ್ರ ಕೆದಿಲಾಯ ಮತ್ತು ಮಗ ಮುರಳಿ ಕೃಷ್ಣ ಆಸ್ತಿ ಮತ್ತು ಚಿನ್ನಾಭರಣಕ್ಕಾಗಿ ಆ.20 ರಂದು ಕೊಲೆ ಮಾಡಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ.
ಪ್ರಕರಣದ ಕೂಲಂಕುಶ ತನಿಖೆ ನಡೆಸಬೇಕಾಗಿರುವುದರಿಂದ ಹೆಚ್ಚಿನ ತನಿಖೆಗಾಗಿ ಏಳು ಪೊಲೀಸ್ ಕಸ್ಟಡಿಗೆ ನೀಡುವಂತೆ ಪೊಲೀಸರು ನ್ಯಾಯಾಲಯಕ್ಕೆ ಮನವಿ ಮಾಡಿದ್ದು ನ್ಯಾಯಾಧೀಶರು ಆರೋಪಿಗಳನ್ನು ಆ.31ರವರೆಗೆ ಪೊಲೀಸ್ ಕಸ್ಟಡಿಗೆ ಒಪ್ಪಿಸಿ ಆದೇಶಿಸಿದ್ದಾರೆ.