ಚೆಕ್‌ ಬೌನ್ಸ್‌ ಕೇಸ್‌ : ಕನ್ನಡದ ನಟಿಗೆ ಜೈಲು ಶಿಕ್ಷೆ, 40 ಲಕ್ಷ ರೂ. ದಂಡ

ಮಂಗಳೂರು: ಚೆಕ್‌ ಬೌನ್ಸ್‌ ಪ್ರಕರಣದಲ್ಲಿ ಕನ್ನಡದ ಹಿರಿಯ ಪೋಷಕ ನಟಿ ಪದ್ಮಜಾ ರಾವ್​ಗೆ ನ್ಯಾಯಾಲಯ ಜೈಲು ಶಿಕ್ಷೆ ವಿಧಿಸಿದೆ. ಮಂಗಳೂರಿನ ಜೆಎಂಎಫ್‌ಸಿ ನ್ಯಾಯಾಲಯ 3 ತಿಂಗಳ ಕಾರಾಗೃಹ ವಾಸ ಮತ್ತು 40.20 ಲಕ್ಷ ರೂ ದಂಡ ವಿಧಿಸಿ ತೀರ್ಪು ನೀಡಿದೆ.
‘ವೀರೂ ಟಾಕೀಸ್’ ಸಿನಿಮಾ ನಿರ್ಮಾಣ ಸಂಸ್ಥೆಯ ಮಾಲೀಕ ವೀರೇಂದ್ರ ಶೆಟ್ಟಿ ಎಂಬವರಿಂದ ಪದ್ಮಜಾ ರಾವ್ 2020ರ ಜೂನ್‌ 17ರಂದು 40 ಲಕ್ಷ ರೂಪಾಯಿ ಸಾಲ ಪಡೆದಿದ್ದರು. ಭದ್ರತೆ ದೃಷ್ಟಿಯಿಂದ ಪದ್ಮಜಾ ರಾವ್ ಚೆಕ್ ನೀಡಿದ್ದರು. ಬಳಿಕ ಪದ್ಮಜಾ ಸಾಲ ವಾಪಸು ಮಾಡಿರಲಿಲ್ಲ. ಹೀಗಾಗಿ ವೀರೇಂದ್ರ ಶೆಟ್ಟಿ ಅವರು ನ್ಯಾಯಾಲಯದ ಮೊರೆ ಹೊಗಿದ್ದರು.

ಈ ಮೊದಲು ವಿಚಾರಣೆಗೆ ಹಾಜರಾದ ಪದ್ಮಜಾ ರಾವ್ ಅವರು ಬೇರೆಯದೇ ರೀತಿಯ ಹೇಳಿಕೆ ನೀಡಿದ್ದರು. ನಾನು ಸಾಲವನ್ನೇ ಪಡೆದಿಲ್ಲ ಎಂದಿದ್ದ ಅವರು, ಚೆಕ್ ನೀಡಿದ ವಿಚಾರವನ್ನೂ ಅಲ್ಲಗಳೆದಿದ್ದರು. ಜೊತೆಗೆ ಪದ್ಮಜಾ ರಾವ್ ಅವರ ಚೆಕ್​ನ ಕದ್ದು ಸಹಿ ನಕಲು ಮಾಡಿದ ಆರೋಪವನ್ನು ಪದ್ಮಜಾ ರಾವ್ ಮಾಡಿದ್ದರು. ಆದರೆ, ಇದಕ್ಕೆ ಸಂಬಂಧಿಸಿ ಅವರು ಕೊರ್ಟ್​ನಲ್ಲಿ ಸಾಕ್ಷಿಗಳನ್ನು ಒದಗಿಸಲು ವಿಫಲರಾಗಿದ್ದರು.
ಈ ತೀರ್ಪಿನ ಪ್ರಕಾರ ಪದ್ಮಜಾ ರಾವ್ ಅವರು 40.20ಲಕ್ಷ ರೂಪಾಯಿ ದಂಡವನ್ನು ಪಾವತಿಸಬೇಕಿದೆ. ಇದರಲ್ಲಿ 40.17 ಲಕ್ಷ ರೂಪಾಯಿ ಹಣವನ್ನು ದೂರುದಾರನಿಗೆ ಕೊಡಬೇಕಿದೆ. ಉಳಿದ 3 ಸಾವಿರ ರೂಪಾಯಿ ಹಣವನ್ನು ಅವರು ಸರ್ಕಾರಕ್ಕೆ ತುಂಬಬೇಕು. ಉಳಿದಂತೆ ಸಾದಾ ಕಾರಗೃಹ ಶಿಕ್ಷೆ ಅನುಭವಿಸಬೇಕಿದೆ.
ಪದ್ಮಜಾ ರಾವ್ ಅವರು ಕನ್ನಡದ ಅನೇಕ ಸೂಪರ್ ಹಿಟ್ ಚಿತ್ರಗಳಲ್ಲಿ ಪೋಷಕ ಪಾತ್ರ ಮಾಡಿದ್ದಾರೆ. ಸದ್ಯ ಅವರು ಕಲರ್ಸ್ ಕನ್ನಡದಲ್ಲಿ ಪ್ರಸಾರ ಕಾಣುತ್ತಿರುವ ‘ಭಾಗ್ಯಲಕ್ಷ್ಮೀ’ ಧಾರಾವಾಹಿಯಲ್ಲಿ ಭಾಗ್ಯನ ಅತ್ತೆ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top