ನೇಪಾಳದಲ್ಲಿ ಚಾಲಕನ ನಿಯಂತ್ರಣ ತಪ್ಪಿ ನದಿಗೆ ಉರುಳಿದ ಬಸ್ | 14 ಭಾರತೀಯರು ಮೃತ್ಯು

ನೇಪಾಳ:  40 ಮಂದಿ ಭಾರತೀಯ ಪ್ರಯಾಣಿಕರಿದ್ದ ಬಸ್ಸೊಂದು ಚಾಲಕನ ನಿಯಂತ್ರಣ ತಪ್ಪಿ ನದಿಗೆ ಉರುಳಿ ಬಿದ್ದ ಪರಿಣಾಮ 14 ಜನರು ಮೃತಪಟ್ಟ ಘಟನೆ ನೇಪಾಳದ ತನಾಹುನ್ ಜಿಲ್ಲೆಯಲ್ಲಿ ನಡೆದಿದೆ.

ನೇಪಾಳದ ತನಾಹುನ್ ಜಿಲ್ಲೆಯ ಮರ್ಸ್ಯಾಂಗ್ಲಿ ನದಿಗೆ ಬಸ್ ಉರುಳಿದೆ. ಘಟನೆಯಲ್ಲಿ 16 ಮಂದಿ ಗಾಯಗೊಂಡಿದ್ದಾರೆ. ಉತ್ತರಪ್ರದೇಶದ ಎಫ್‌ಟಿ 7623 ನಂಬ‌ರ್ ಪ್ಲೇಟ್ ಹೊಂದಿದ್ದ ಬಸ್ ನದಿಗೆ ಬಿದ್ದಿದೆ. ತನಾಹುನ್ ಜಿಲ್ಲೆಯ ಡಿಎಸ್‌ಪಿ ದೀಪ್‌ಕುಮಾರ್ ರಾಯಾ ದೂರವಾಣಿಯ ಮೂಲಕ ದೃಢಪಡಿಸಿದ್ದಾರೆ.

40 ಭಾರತೀಯ ಪ್ರಯಾಣಿಕರಿದ್ದ ಬಸ್ ಪೋಖರಾದಿಂದ ತೆರಳುತ್ತಿತ್ತು. ಅಪಘಾತ ಸ್ಥಳದಲ್ಲಿ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ. ಬಸ್ಸು ರಸ್ತೆಯಿಂದ ಸುಮಾರು 300 ಮೀಟರ್ ಉರುಳಿ ನದಿಗೆ ಬಿದ್ದಿದೆ..



































 
 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top