ಸ್ಕೂಟರ್ ಸವಾರನ ಮೇಲೆ ಕಾಡು ಹಂದಿ ದಾಳಿ | ಗಂಭೀರ ಗಾಯ

ಪುತ್ತೂರು : ಅರಿಯಡ್ಕ ಗ್ರಾಮದ ಕೌಡಿಚ್ಚಾರು ಸಮೀಪದ ಕುರುಂಜ ಮಣ್ಣಾಪು ಎಂಬಲ್ಲಿ ಸ್ಕೂಟರ್ ಸವಾರನ ಮೇಲೆ ಕಾಡು ಹಂದಿಯೊಂದು ದಾಳಿ ಮಾಡಿ ಗಂಭೀರವಾಗಿ ಗಾಯಗೊಳಿಸಿದ ಘಟನೆ ಮಂಗಳವಾರ ಬೆಳಿಗ್ಗೆ ನಡೆದಿದೆ.

ಕುಂಬ್ರ ಪೆಟ್ರೋಲ್‌ ಪಂಪ್ ನ ಮ್ಯಾನೇಜ‌ರ್ ಆಗಿರುವ ಧನುಷ್ ಗಾಯಗೊಂಡವರು.

ಧನುಷ್‌ ಅವರು ಮನೆಯಿಂದ ತನ್ನ ಉದ್ಯೋಗದ ಸ್ಥಳವಾದ, ಕುಂಬ್ರ ಪೆಟ್ರೋಲ್ ಪಂಪ್ ಗೆ ಬರುತ್ತಿದ್ದ ವೇಳೆ ಕುರುಂಜ ಮಣ್ಣಾಪು ಬಳಿ ಕಾಡು ಹಂದಿ ದಿಢೀ‌ರ್ ದಾಳಿ ನಡೆಸಿದೆ. ಇದರಿಂದ ಸವಾರ ಗಲಿಬಿಲಿಗೊಂಡಿದ್ದು, ಬೈಕ್‌ ಸಮೇತ ರಸ್ತೆಗೆ ಬಿದ್ದಿದ್ದಾರೆ. ಆಗ ಅವರ ಮೇಲೆ ಮತ್ತೆ ಕಾಡು ಹಂದಿ ದಾಳಿ ನಡೆಸಿದೆ.





























 
 

ಧನುಷ್ ಅವರ ಬಲ ಕೈಗೆ ಕಚ್ಚಿ ಗಂಭೀರ ಗಾಯಗೊಳಿಸಿದಲ್ಲದೆ ಇತರ ದೇಹದ ಭಾಗಗಳಿಗೆ ಗಾಯವಾಗಿದೆ. ಗಾಯಾಳುವನ್ನು 108 ಆ್ಯಂಬುಲೆನ್ಸ್ ಮೂಲಕ ಪುತ್ತೂರು ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top