ಪುತ್ತೂರು : ಆಟೋ ಚಾಲಕನಿಗೆ ಚೂರಿಯಿಂದ ಇರಿತ ಘಟನೆ ನಡೆದಿದೆ.ಕಾರ್ಯಡಿ ನಿವಾಸಿ ರವೂಫ್ ಎಂಬವರ ಪುತ್ರ ಆಪೀ ಬಂಧಿತ ಆರೋಪಿ.
ವಿಟ್ಲ ಪೊಲೀಸ್ ಠಾಣಾ ವ್ಯಾಪ್ತಿಯ ಉರಿಮಜಲು ಜಂಕ್ಷನ್‌ನಲ್ಲಿ ಇಡ್ಕಿದು ಗ್ರಾಮ ಪಂಚಾಯತ್ ಕಚೇರಿ ಮುಂಭಾಗದಲ್ಲಿ ಘಟನೆ ನಡೆದಿದೆ.
ಆಟೋ ಚಾಲಕ ಶರೀಫ್ ಗಾಯಗೊಂಡವರಾಗಿದ್ದು, ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
























