ಅಂಬಿಕಾ ಸಿಬಿಎಸ್‌ ಇ ವಿದ್ಯಾರ್ಥಿಗಳಿಗೆ ಈಜು ಸ್ಪರ್ಧೆಯಲ್ಲಿ ಹಲವು ಬಹುಮಾನ

ಪುತ್ತೂರು : ಮಂಗಳೂರಿನ ಶಕ್ತಿ ವಿದ್ಯಾಸಂಸ್ಥೆಯಲ್ಲಿ ನಡೆದ ವಿದ್ಯಾ ಭಾರತಿ ಜಿಲ್ಲಾ ಮಟ್ಟದ ಈಜು ಸ್ಪರ್ಧೆಯಲ್ಲಿ ಅಂಬಿಕಾ ಸಿಬಿಎಸ್‌ಇ ವಿದ್ಯಾಸಂಸ್ಥೆಯ ಹತ್ತನೇ ತರಗತಿಯ ವಿದ್ಯಾರ್ಥಿ ವರ್ಧಿನ್ ದೀಪಕ್  ರೈ 17 ವರ್ಷಕ್ಕಿಂತ ಕೆಳಗಿನ ಹುಡುಗರ ವಿಭಾಗದ  50 ಮೀಟರ್ ಬಟರ್ ಫ್ಲೈ, 100 ಮೀಟರ್ ಬ್ರೆಸ್ಟ್‌ಸ್ಟ್ರೋಕ್,  50 ಮೀಟರ್ ಬ್ರೆಸ್ಟ್‌ಸ್ಟ್ರೋಕ್‌ನಲ್ಲಿ ಪ್ರಥಮ ಸ್ಥಾನ ಪಡೆದಿರುತ್ತಾರೆ. ಆರನೇ ತರಗತಿಯ ವಿದ್ಯಾರ್ಥಿ ಪ್ರತ್ಯುಷ್ ಎಲ್.ಎಸ್. ಗೌಡ  14 ವರ್ಷ  ಕೆಳಗಿನ   ಹುಡುಗರ ವಿಭಾಗದ  50 ಮೀಟರ್ ಬಟರ್ ಫ್ಲೈ ಮತ್ತು 50 ಮೀಟರ್ ಫ್ರೀ ಸ್ಟೈಲ್‌ನಲ್ಲಿ  ದ್ವಿತೀಯ ಸ್ಥಾನ, 50ಮೀಟರ್  ಬ್ಯಾಕ್ ಸ್ಟ್ರೋಕ್ ಮತ್ತು 4*100 ೦ ರಿಲೇಯಲ್ಲಿ ಪ್ರಥಮ  ಸ್ಥಾನವನ್ನು ಪಡೆದಿರುತ್ತಾರೆ.

ಎಂಟನೇ ತರಗತಿಯ ವಿದ್ಯಾರ್ಥಿನಿ ಮಹೆಕ್ ರವಿಕುಮಾರ್ ಕೊತಾರಿ  14  ವರ್ಷ ಕೆಳಗಿನ ಹುಡುಗಿಯರ ವಿಭಾಗದ 50 ಮೀಟರ್ ಬ್ರೆಸ್ಟ್‌ಸ್ಟ್ರೋಕ್ ಮತ್ತು 50  ಮೀಟರ್ ಬ್ಯಾಕ್ ಸ್ಟ್ರೋಕ್‌ನಲ್ಲಿ ತೃತೀಯ ಸ್ಥಾನ, 100  ಮೀಟರ್ ಬ್ಯಾಕ್ ಸ್ಟ್ರೋಕ್‌ನಲ್ಲಿ ಪ್ರಥಮ ಸ್ಥಾನವನ್ನು ಪಡೆದಿರುತ್ತಾರೆ.

ಎಂಟನೇ ತರಗತಿಯ ವಿದ್ಯಾರ್ಥಿ ಲಲನ್ ಯು ನಾಯ್ಕ್ 14 ವರ್ಷ ಕೆಳಗಿನ ಹುಡುಗರ ವಿಭಾಗದ 100 ಮೀಟರ್ ಫ್ರೀ ಸ್ಟೈಲ್ ನಲ್ಲಿ ದ್ವಿತೀಯ ಸ್ಥಾನ, 4*100  ಫ್ರೀ ಸ್ಟೈಲ್ ರಿಲೇಯಲ್ಲಿ ಪ್ರಥಮ ಸ್ಥಾನ,50೦ ಮೀಟರ್ ಬ್ಯಾಕ್ ಸ್ಟ್ರೋಕ್‌ನಲ್ಲಿ ತೃತೀಯ ಸ್ಥಾನ ಪಡೆದಿರುತ್ತಾರೆ. ಆರನೇ ತರಗತಿಯ ವಿದ್ಯಾರ್ಥಿ ದೀಪಾಂಶ್ ಶೆಟ್ಟಿ 14  ವರ್ಷ ಕೆಳಗಿನ ಹುಡುಗರ ವಿಭಾಗದ 4*100  ರಿಲೇಯಲ್ಲಿ ಪ್ರಥಮ  ಸ್ಥಾನ ಪಡೆದಿರುತ್ತಾರೆ.





























 
 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top