ಪುತ್ತೂರು: ಐಕ್ಯ ಕಲಾ-ಸೇವಾ ಟ್ರಸ್ಟ್ ನೇತೃತ್ವದಲ್ಲಿ ರೋಟರಿ ಕ್ಯಾಂಪ್ಕೋ ಬ್ಲಡ್ ಸೆಂಟರ್, ಪ್ರಗತಿ ಪ್ಯಾರ ಮೆಡಿಕಲ್ ಸೈನ್ಸ್ ಸಹಯೋಗದಲ್ಲಿ ಕೆಮ್ಮಿಂಜೆ ವಲಯ ಭೂಮಿಕಾ ಒಕ್ಕೂಟ ಹಾಗೂ ಮೊಟ್ಟೆತ್ತಡ್ಕ ಶ್ರೀ ಚಾಮುಂಡೇಶ್ವರಿ ಯುವ ಬಳಗದ ಸಹಕಾರದೊಂದಿಗೆ ಸ್ವಾತಂತ್ರ್ಯೋತ್ಸವದ ಅಂಗವಾಗಿ ರಕ್ತದಾನ ಶಿಬಿರ ಹಾಗೂ ರಕ್ತ ವರ್ಗೀಕರಣ ಕಾರ್ಯಕ್ರಮ ಆ.18 ಭಾನುವಾರ ಮೊಟ್ಟೆತ್ತಡ್ಕ ಅಗ್ನಿಶಾಮಕ ಠಾಣೆಯಲ್ಲಿ ನಡೆಯಲಿದೆ.
ಶಾಸಕರ ಅಶೋಕ್ ಕುಮಾರ್ ರೈ ಉದ್ಘಾಟಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಡಾ.ಸುರೇಶ್‍ಪುತ್ತೂರಾಯ, ಪ್ರಗತಿ ಕಾಲೇಜು ಆಫ್‍ಪ್ಯಾರ ಮೆಡಿಕಲ್ ಸೈನ್ಸ್ ಆಡಳಿತಾಧಿಕಾರಿ ಪ್ರೀತಾ ಹೆಗ್ಡೆ, ಪುತ್ತೂರು ಐಸಿಎಆರ್, ದಿಸಿಆರ್ ಸಲಹೆಗಾರ ಮುರಳೀಕೃಷ್ಣ, ಅಗ್ನಿಶಾಮಕ ಠಾಣಾಧಿಕಾರಿ ಶಂಕರ್, ಕೆಮ್ಮಿಂಜೆ ಶಾಲಾ ಎಸ್‍ಡಿಎಂಸಿ ಅಧ್ಯಕ್ಷ ಮೋಹನ ಕೆ., ನಗರಸಭಾ ಸದಸ್ಯರಾದ ಶೈಲಾ ಪೈ, ಶೀನಪ್ಪ ನಾಯ್ಕ್‍ಪಾಲ್ಗೊಳ್ಳಲಿದ್ದಾರೆ.
























